

ಐಗಳಿ: ಅಥಣಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಆಸೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸ್ಥಳೀಯ ಜೈನ ಸಮುದಾಯ ಸಭಾ ಭವನ ಹಾಗೂ ಮುಖ್ಯ ಬಜಾರದಲ್ಲಿರುವ ಶ್ರೀಲಕ್ಷ್ಮೀ ದೇವಾಲಯದ ನೂತನ ಕಟ್ಟಡ ಕಾಮಗಾರಿಗೆ ಶುಕ್ರವಾರ ಪೂಜೆ ನೆರವೇರಿಸಿ ಮಾತನಾಡಿ, ಜೈನ ಸಮುದಾಯ ಭವನಕ್ಕೆ 30 ಲಕ್ಷ ರೂ. ಹಾಗೂ ಲಕ್ಷ್ಮೀ ದೇವಸ್ಥಾನಕ್ಕೆ 10 ಲಕ್ಷ ರೂ.ಮಂಜೂರಾಗಿವೆ. ಈ ಎರಡು ಕಾಮಗಾರಿಗಳು ಉತ್ತಮ ಗುಣಮಟ್ಟದಾಗಿರಲಿ ಮತ್ತು ನಿಗದಿತ ಅವಧಿಯೊಳಗೆ ಮುಗಿಯಲಿ ಎಂದು ಸೂಚಿಸಿದರು.
ಸಿ.ಎಸ್.ನೇಮಗೌಡ, ಶ್ರೀಶೈಲ ನಾಯಿಕ, ಎಂ.ಪಿ.ಮಾಕಾಣಿ, ಶ್ರೀಕಾಂತ ಮಾಕಾಣಿ, ಜಿಪಂ ಇಲಾಖೆ ಅಧಿಕಾರಿ ಈರಣ್ಣ ವಾಲಿ, ಆರ್.ಆರ್.ತೆಲಸಂಗ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಪಿಡಿಒ ರಾಜೇಂದ್ರ ಪಾಠಕ, ನಿಂಗನಗೌಡ ಪಾಟೀಲ, ರುದ್ರಯ್ಯ ಹಿರೇಮಠ, ಗ್ರಾಪಂ ಸದಸ್ಯರಾದ ಬಸವರಾಜ ಬಿರಾದಾರ, ಸುರೇಶ ಬಿಜ್ಜರಗಿ, ಶ್ರೀಶೈಲ ಮಿರ್ಜಿ, ಓಂಕಾರಯ್ಯ ಮಠಪತಿ ಇತರರಿದ್ದರು.
ಜೈನ ಸಮುದಾಯದ ಅಧ್ಯಕ್ಷ ಸುರೇಶ ಮಾಕಾಣಿ, ಉಪಾಧ್ಯಕ್ಷ ದೇವೇಂದ್ರ ಬೆಳಗಲಿ, ಅಪ್ಪಾಸಾಬ ಮಾಕಾಣಿ, ಬಾಹುಬಲಿ ಸಂಕನ್ನವರ, ಶಾಂತು ಸವದಿ, ಸಚಿನ ಮಾಕಾಣಿ ಶಿಕ್ಷಕ ಮಹಾಬಲ್ ಮಾಕಾಣಿ ಸ್ವಾಗತಿಸಿದರು.