ಅಥಣಿ ಶುಗರ್ಸ್‌ಗೆ ಬೆಸ್ಟ್ ಡಿಸ್ಟಿಲರಿ ಪ್ರಶಸ್ತಿ

25Kagavad1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಕಾಗವಾಡ: ಕೆಂಪವಾಡದ ಅಥಣಿ ಶುಗರ್ಸ್ ಲಿಮಿಟೆಡ್ ಡಿಸ್ಟಿಲರಿಗೆ ಸತತ 8ನೇ ಬಾರಿ ಬೆಸ್ಟ್ ಡಿಸ್ಟಿಲರಿ ಪ್ರಶಸ್ತಿ ದೊರಕಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಇಲ್ಲಿನ ಕಾರ್ಖಾನೆ ಕಚೇರಿಯಲ್ಲಿ ಈಚೆಗೆ ಮಾತನಾಡಿದ ಅವರು, ಆಂಧ್ರಪ್ರದೇಶದ ತಿರುಪತಿಯಲ್ಲಿ ಸೆ.19ರಂದು ಜರುಗಿದ ವಾರ್ಷಿಕ ಸಭೆಯಲ್ಲಿ ದಕ್ಷಿಣ ಭಾರತ ಕಬ್ಬು ಹಾಗೂ ಸಕ್ಕರೆ ತಂತ್ರಜ್ಞಾನ ಸಂಸ್ಥೆ ಪ್ರಶಸ್ತಿ ಕೊಡಮಾಡಿದೆ. ಈ ಸಾಧನೆಗೆ ಕಾರಣರಾದ ಡಿಸ್ಟಿಲರಿ ಮ್ಯಾನೇಜರ್ ಹಾಗೂ ಎಲ್ಲ ಅಧಿಕಾರಿಗಳು, ಕಾರ್ಮಿಕರು, ರೈತರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಯುವ ನಾಯಕ ಶ್ರೀನಿವಾಸ ಪಾಟೀಲ, ಕಾರ್ಯನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ, ಡಿಸ್ಟಿಲರಿ ವಿಭಾಗದ ಜನರಲ್ ಮ್ಯಾನೇಜರ್ ಕಿರಣ ಮುದಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net