ಅಥಣಿ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿ

4
ಅಥಣಿಯಲ್ಲಿ ಅಭಿಮಾನಿ ಬಳಗದಿಂದ ಮಾಜಿ ಸಚಿವೆ ಲೀಲಾದೇವಿ ಪ್ರಸಾದ ಅವರನ್ನು ಸತ್ಕರಿಸಲಾಯಿತು. ಪ್ರಕಾಶ ಮಹಾಜನ, ಶಿವಕುಮಾರ ತೆಲಸಂಗ, ಭರತ ಸೋಮಯ್ಯ, ಶೈಲಜಾ, ಮೀನಾಕ್ಷಿ ಇತರರಿದ್ದರು.
Published on

ಅಥಣಿ: ಬೆಂಗಳೂರು ಮಹಾನಗರ ಚುನಾವಣೆ ಎದುರಿಸಿ ಅಥಣಿಗೆ ಆಗಮಿಸಿದ ನನ್ನನ್ನು ಮತದಾರರು ಎರಡು ಬಾರಿ ಶಾಸಕಿಯಾಗಿನ್ನಾಗಿ ಮಾಡಿದರು. ಅಧಿಕಾರದಲ್ಲಿದ್ದಾಗ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಸಾಮಾಜಿಕ ಸೇವೆ ಸಲ್ಲಿಸಿ ಮತದಾರರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ.

ಜನರ ಅಭಿಮಾನ ಮತ್ತು ಪ್ರೀತಿಗೆ ಚಿರಋಣಿ ಎಂದು ಮಾಜಿ ಸಚಿವೆ, ಉಡುತಡಿ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷೆ ಲೀಲಾದೇವಿ ಪ್ರಸಾದ ಹೇಳಿದರು.
ಪಟ್ಟಣದ ಗುಜರಾತಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ಥಕ ಬದುಕಿನ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ಅಭಿಮಾನದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೀರಶೈವ ಮಹಿಳಾ ಬಳಗ, ಕದಳಿ ಮತ್ತು ಮುಕ್ತಾಯಿ ಮಹಿಳಾ ಬಳಗದವರಿಂದ ಸಿರಿಧಾನ್ಯಗಳಿಂದ ಲೀಲಾದೇವಿ ಪ್ರಸಾದವರ ತುಲಾಭಾರ ಸೇವೆ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಹಿರಿಯ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು, ಪ್ರಕಾಶ ಮಹಾಜನ, ಅರುಣ ಯಲಗುದ್ರಿ, ರಮೇಶಗೌಡ ಪಾಟೀಲ, ಸಿದ್ದಪ್ಪ ಮುದಕಣ್ಣವರ, ಶಂಭುಲಿಂಗ ಮಮದಾಪೂರ, ಅಪ್ಪಾಸಾಹೇಬ ಅಲಿಬಾದಿ, ಸಿದ್ದಣ ಉತ್ನಾಳ, ರಾವಸಾಬ ಜಕನೂರ, ಸಂಜಯ ತೆಲಸಂಗ, ಈರಣ್ಣಗೌಡ ಪಾಟೀಲ, ಎಂ.ಡಿ.ತೊದಲಬಾಗಿ, ಶಿವಕುಮಾರ ತೆಲಸಂಗ, ಭರತ ಸೋಮಯ್ಯ, ಗಿರೀಶ ದಿವಾನಮಳ, ಮುತ್ತಣ್ಣ ಸಂತಿ, ವಿಜಯ ನೇಮಗೌಡ, ನಿತ್ಯಾನಂದ ಚರಂತಿಮಠ ಇತರರಿದ್ದರು. ವಿದ್ಯಾ ಬುರ್ಲಿ ನಿರೂಪಿಸಿದರು. ಮುರುಘೇಶ ಬಾನಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net