ನವೆಂಬರ್‌ನಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತೋತ್ಸವ; ನ.14 ರಿಂದ ಮೂರು ದಿನಗಳ ಕಾರ್ಯಕ್ರಮ

Basavotsava
Published on

ಬೆಂಗಳೂರು: ಸುಕ್ಷೇತ್ರ ಅಥಣಿಯ ಗಚ್ಚಿನ ಮಠ ಹಾಗೂ ವಿಜಯನಗರದ ರಾಷ್ಟ್ರೀಯ ಬಸವ ತತ್ವ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಬರುವ ನವೆಂಬರ್‌ನಲ್ಲಿ ಅಥಣಿ ಮುರುೇಂದ್ರ ಶಿವಯೋಗಿಗಳ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.

ವಿಜಯನಗರದ ಹಂಪಿನಗರ ಕ್ರೀಡಾಂಗಣದಲ್ಲಿ ನ. 14,15,16 ರಂದು ಮೂರು ದಿನಗಳ ಕಾಲ ಬಸವೋತ್ಸವ ಹಾಗೂ ಹಾಗೂ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಬಸವಣ್ಣನವರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬೆಳೆದ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಬಸವ ತತ್ವ ಪ್ರಸಾರಕ್ಕೆ ಪ್ರೇರಣೆ ನೀಡಿದರು. ನಾಡಿನ ಹಲವು ದಿಗ್ಗಜರಿಗೆ ಆಶೀರ್ವಾದ ಮಾಡಿ ಅವರ ಬೆಳವಣಿಗೆಗೆ ಕಾರಣಕರ್ತರಾದ ಮುರುಗೇಂದ್ರ ಶಿವಯೋಗಿಗಳ ಜಯಂತೋತ್ಸವವನ್ನು ಬಸವೋತ್ಸವ ಎಂಬ ಹೆಸರಿನಲ್ಲಿ ಆಚರಿಸಲಾಗುವುದು. ಸಮಿತಿಯ ಅಧ್ಯಕ್ಷರಾಗಿ ಮಾಜಿ ಉಪ ಮಹಾಪೌರ ಪುಟ್ಟರಾಜು ಅವರನ್ನು ಆಯ್ಕೆ ಮಾಡಲಾಗಿದೆ.

ಶಾಸಕ ಪ್ರಿಯಕೃಷ್ಣ ಹಾಗೂ ಅರುಣ್ ಸೋಮಣ್ಣ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಸಭೆಯಲ್ಲಿ ಬೋವಿಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶಿರಸಿ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ವಿರಕ್ತ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ,ಗುಲ್ಬರ್ಗದ ಸಿದ್ಧಬಸವ ಕಬೀರ್ ಸ್ವಾಮೀಜಿ, ಶ್ರೀ ಗುರು ಶಾಂತವೀರ ಸ್ವಾಮೀಜಿ, ರಾಷ್ಟ್ರೀಯ ಬಸವತತ್ವ ಪರಿಷತ್ತಿನ ಅಧ್ಯಕ್ಷ ಅರುಣ್ ಕುಮಾರ್, ಕನ್ನಡಪರ ಹೋರಾಟಗಾರ ಪಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net