ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿ ನಿರಂತರ

29Athanigramin1
Published on

ಅಥಣಿ ಗ್ರಾಮೀಣ: ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ಗಮನಿಸಿ ಹೊಸ ಕಟ್ಟಡ ನಿರ್ಮಿಸುವ ಮೂಲಕ ಅಥಣಿ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ತಂದೆ ಶಾಸಕ ಲಕ್ಷ್ಮಣ ಸವದಿ ಅವರು ಗಣನೀಯವಾಗಿ ಶ್ರಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಅಥಣಿ ತಾಲೂಕಿನ ತಾಲೂಕಿನ ಝುಂಜರವಾಡ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ 1.20 ಕೋಟಿ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡ ಹಾಗೂ ಶಿರಹಟ್ಟಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕಿನ ಅಥಣಿ ಗ್ರಾಮೀಣ ತಂಗಡಿ ರಸ್ತೆಯಲ್ಲಿನ ಅಂಗನವಾಡಿ ಕೇಂದ್ರ, ಬಾಸಿಂಗೆ ತೋಟ, ಹೊಸಟ್ಟಿ ಗ್ರಾಮದ ಅಂಗನವಾಡಿ ನಂ. 3, ಮಸರಗುಪ್ಪಿ ಅಂಗನವಾಡಿ, ದೇವರಡ್ಡೇರಹಟ್ಟಿ ಗ್ರಾಮದ ಅಂಗನವಾಡಿ ನಂ.1 ಹಾಗೂ ಝುಂಜರವಾಡ ಗ್ರಾಮದ ಅಂಗನವಾಡಿ ನಂ.5 ಸೇರಿ ಒಟ್ಟು 1.20 ಕೋಟಿ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಚಾಲನೆ ದೊರೆತಿದೆ.

ಶಿಕ್ಷಣ ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿದರು.

ಮುಖಂಡ ಶೀತಲಗೌಡ ಪಾಟೀಲ, ಸಿಡಿಪಿಒ ರೇಣುಕಾ ಹೊಸಮನಿ, ಜಿಪಂ ಇಒ ಈರಪ್ಪ ವಾಲಿ, ಗ್ರಾಪಂ ಅಧ್ಯಕ್ಷ ಕುಮಾರ ನೇಮಗೌಡ, ಅಣ್ಣಾಸಾಬ್ ಯಂಡೋಳ್ಳಿ, ರಾವಸಾಬ ಸಂಕೋನಟ್ಟಿ, ಮುತ್ತಪ್ಪ ಹಿಡಕಲ್ಲ, ಎ.ಸಿ.ಪಾಟೀಲ, ಸದಾಶಿವ ಜಗದಾಳ, ಅಪ್ಪಾಸಾಬ ಹೊಸಾಲಕರ, ಸುರೇಶ ಗುಳಪ್ಪನವರ, ಶ್ರೀಶೈಲ ನಾಯಿಕ, ಶಿವಾನಂದ ದಿವಾನಮಳ, ಅರುಣ ಬಾಸಿಂಗೆ, ಶಿವು ನಾಯಿಕ, ಪಿಡಿಒ ಎ.ವೈ ಕೊಲೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net