ಅಥಣಿಗೆ ಆಗಮಿಸಿದ ಜೈನಮುನಿ ಪಾದಯಾತ್ರೆ

1414
Published on

ಅಥಣಿ: ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನಮುನಿ 108 ಕುಲರತ್ನ ಭೂಷಣ ಮಹಾರಾಜರು ಕೃಷ್ಣೆಯಿಂದ ನರ್ಮದಾವರೆಗೆ ಸುಮಾರು 900 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದು, ಶನಿವಾರ ಅಥಣಿ ಪಟ್ಟಣಕ್ಕೆ ಪಾದಯಾತ್ರೆ ಆಗಮಿಸಿತ್ತು. ಸಾವಿರಾರು ಭಕ್ತರು ಮಹಾರಾಜರ ಆಶೀರ್ವಾದ ಪಡೆದರು.

ಕುಲರತ್ನ ಭೂಷಣ ಮಹಾರಾಜರು ಮಾತನಾಡಿ, ಹೇಮಾವರ ಗುರುವಂದನೆ ತೀರ್ಥ ವಂದನಾ ಸಂದೇಶ ಇಟ್ಟುಕೊಂಡು ‘ಕೃಷ್ಣೆಯಿಂದ ನರ್ಮದಾವರೆಗೆ’ ಎಂಬ ಸಂಕಲ್ಪ ಮಾಡಿ 108 ಆಚಾರ್ಯ ವಿದ್ಯಾಸಾಗರ ಮುನಿ ಮಹಾರಾಜರು ದೀಕ್ಷೆ ತೆಗೆದುಕೊಂಡು 55 ವರ್ಷ ಕಳೆದಿವೆ. ಆದರೆ, ಅವರು ಈವರೆಗೆ ಕರ್ನಾಟಕದಲ್ಲಿ ಪದಾರ್ಪಣೆ ಮಾಡಿಲ್ಲ. ಆಚಾರ್ಯರು ಕರ್ನಾಟಕಕ್ಕೆ ಪದಾರ್ಪಣೆ ಮಾಡಬೇಕು.

ಇಲ್ಲಿಯೂ ಜೈನ ಧರ್ಮದ ಪ್ರಚಾರವಾಗಬೇಕು. ಪಂಚಮ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಧರ್ಮ ಉಳಿಯುತ್ತದೆ ಎಂದು ಜೈನ ಸಿದ್ಧಾಂತದಲ್ಲಿ ಹೇಳಲಾಗಿದೆ. ಆ ಸಿದ್ಧಾಂತ ಸತ್ಯವಾಗಬೇಕಾದರೆ ಆಚಾರ್ಯ ವಿದ್ಯಾಸಾಗರ ಮುನಿರಾಜರು ಈ ದಕ್ಷಿಣ ಭಾರತಕ್ಕೆ ಆಗಮಿಸಬೇಕು ಎನ್ನುವುದು ನಮ್ಮ ಆಸೆಯಾಗಿದೆ. ಆದ್ದರಿಂದ ನಾನು ಅವರ ದರ್ಶನಕ್ಕೆ ಸುಮಾರು 900 ಕಿ.ಮೀ. ಕ್ರಮಿಸಿ ವಿವಿಧ ಜೈನ ಮಠಗಳಿಗೆ ಭೇಟಿ ನೀಡುತ್ತ ಹೋಗುತ್ತಿದ್ದೇನೆ ಎಂದರು.

ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಮುನಿಗಳು ಭೇಟಿ ನೀಡಿದರು. ಸವದಿ ಮಾತನಾಡಿ, ಮಹಾರಾಜರ ಸಮಾಜಮುಖಿ ಸೇವಾಕಾರ್ಯ ನಾಡಿಗೆ ಮಾದರಿಯಾಗಿದೆ. ಅವರ ಪಾದಯಾತ್ರೆ ಯಶಸ್ವಿಯಾಗಲಿ. ಅತ್ಯಂತ ಕಠಿಣ ವ್ರತ ಪಾಲಿಸುವ ಜೈನ ಸಮುದಾಯದಲ್ಲಿ ಪಾದಯಾತ್ರೆ ಹಮ್ಮಿಕೊಂಡು ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಮಹಾರಾಜರ ಕಾರ್ಯ ಶ್ಲಾಘನೀಯ ಎಂದರು.

ಶ್ರೀನಿವಾಸ ಪಾಟೀಲ, ಸುಮಿತ ಸವದಿ, ಕೆ.ಎ.ವಣಜೋಳ, ಸಂಜಯ ನಾಡಗೌಡ, ಅಪ್ಪಾಸಾಬ ಅವತಾಡೆ ಮತ್ತಿತರರು ಇದ್ದರು. ಆದ್ದರಿಂದ ನಾನು ಅವರ ದರ್ಶನಕ್ಕೆ ಸುಮಾರು 900 ಕಿ.ಮೀ. ಕ್ರಮಿಸಿ ವಿವಿಧ ಜೈನ ಮಠಗಳಿಗೆ ಭೇಟಿ ನೀಡುತ್ತ ಹೋಗುತ್ತಿದ್ದೇನೆ ಎಂದರು. ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಮುನಿಗಳು ಭೇಟಿ ನೀಡಿದರು. ಸವದಿ ಮಾತನಾಡಿ, ಮಹಾರಾಜರ ಸಮಾಜಮುಖಿ ಸೇವಾಕಾರ್ಯ ನಾಡಿಗೆ ಮಾದರಿಯಾಗಿದೆ.

ಅವರ ಪಾದಯಾತ್ರೆ ಯಶಸ್ವಿಯಾಗಲಿ. ಅತ್ಯಂತ ಕಠಿಣ ವ್ರತ ಪಾಲಿಸುವ ಜೈನ ಸಮುದಾಯದಲ್ಲಿ ಪಾದಯಾತ್ರೆ ಹಮ್ಮಿಕೊಂಡು ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಮಹಾರಾಜರ ಕಾರ್ಯ ಶ್ಲಾಘನೀಯ ಎಂದರು. ಶ್ರೀನಿವಾಸ ಪಾಟೀಲ, ಸುಮಿತ ಸವದಿ, ಕೆ.ಎ.ವಣಜೋಳ, ಸಂಜಯ ನಾಡಗೌಡ, ಅಪ್ಪಾಸಾಬ ಅವತಾಡೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net