ಹುಬ್ಬಳ್ಳಿ: ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಪ್ರಾಯೋಜಿತ ಸಂಸ್ಥೆ ಅಪೇರಲ್ ಟ್ರೇನಿಂಗ್ ಆಂಡ್ ಡಿಸೈನ್ ಸೆಂಟರ್ (ಎಟಿಡಿಸಿ)ಹಾಗೂ ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಡಿ ಫ್ಯಾಷನ್ ಡಿಸೈನರ್, ಹೊಲಿಗೆ ತರಬೇತಿಗಾಗಿ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
18ರಿಂದ 35 ವಯೋಮಾನದ ಕನಿಷ್ಠ 5ನೇ ತರಗತಿ ಪಾಸಾದವರು ಅಜಿರ್ ಸಲ್ಲಿಸಬಹುದು. ಅರ್ಹ ಅಭ್ಯಥಿರ್ಗಳು ಎಟಿಡಿಸಿ, ಎ.ಟಿ.ಐ ಕಾಂಪೌಂಡ್, ಕೆನರಾ ಹೋಟೆಲ್ ಹಿಂಭಾಗ, ಹೊಸೂರ ಹುಬ್ಬಳ್ಳಿ, ಈ ವಿಳಾಸಕ್ಕೆ ತಿಳಿಸಲಾದ ದೃಢಿಕೃತ ದಾಖಲಾತಿಗಳ 3 ಪ್ರತಿಗಳು, ಇತ್ತೀಚಿನ 5 ಭಾವಚಿತ್ರದೊಂದಿಗೆ ನವೆಂಬರ್ 10ರೊಳಗೆ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಕಚೇರಿ ಸಂಪಕಿರ್ಸಲು ಕೇಂದ್ರದ ಮುಖ್ಯಸ್ಥ ಸಿದ್ದಲಿಂಗೇಶ ಹಸಬಿ ತಿಳಿಸಿದ್ದಾರೆ.