ಡಿಪ್ಲೋಮಾ ತರಬೇತಿಗೆ ಆಹ್ವಾನ

Published on

ಹುಬ್ಬಳ್ಳಿ: ಇಲ್ಲಿಯ ಅಪೇರಲ್ ಟ್ರೇನಿಂಗ್ ಆಂಡ್ ಡಿಸೈನ್ ಸೆಂಟರ್ (ಎಟಿಡಿಸಿ) ವತಿಯಿಂದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಫ್ಯಾಷನ್ ಡಿಸೈನಿಂಗ್ (ಎಫ್ ಡಿಟಿ) ಒಂದು ವರ್ಷದ ಡಿಪ್ಲೋಮಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಠ 10ಪ್ಲಸ್ 2 (ಪಿಯುಸಿ, ಐಟಿಐ, ಡಿಪ್ಲೋಮಾ) ತರಗತಿಯಲ್ಲಿ ಉತ್ತೀರ್ಣರಾದ 18ರಿಂದ 35 ವಯೋಮಾನದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು.

ಅರ್ಹ ಅಭ್ಯರ್ಥಿಗಳು ಎ.ಟಿ.ಡಿ.ಸಿ, ವೊಕೇಷನಲ್ ಇನ್ ಸ್ಟಿಟ್ಯೂಟ್ ಎ.ಟಿ.ಐ ಕಾಂಪೌಂಡ್, ಕೆನರಾ ಹೋಟೆಲ್ ಹಿಂಭಾಗ, ಹೊಸೂರ ಹುಬ್ಬಳ್ಳಿ. ಈ ವಿಳಾಸಕ್ಕೆ ಖುದ್ದಾಗಿ ದೃಢಿಕೃತ ದಾಖಲಾತಿಗಳ ಎರಡು ಪ್ರತಿ ಹಾಗೂ ಇತ್ತೀಚಿನ 5 ಭಾವಚಿತ್ರದೊಂದಿಗೆ ಸೆ. 15ರೊಳಗೆ ನಿಗದಿತ ಅರ್ಜಿ ಸಲ್ಲಿಸಲು ಕೋರಲಾಗಿದೆ ಎಂದು ಕೇಂದ್ರದ ಮುಖ್ಯಸ್ಥೆ ಮಂಜುಳಾ ಶಿಂಧೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net