ಎನ್​ಸಿಸಿ ಕೆಡೆಟ್​ಗಳಿಗೆ ಎಟಿಸಿ ಶಿಬಿರ

New NCC
Published on

ಧಾರವಾಡ : ಎನ್​ಸಿಸಿ ಕೆಡೆಟ್​ಗಳ ವಾರ್ಷಿಕ ತರಬೇತಿ ಶಿಬಿರವು (ಎಟಿಸಿ) ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ.

ಶಿಬಿರ ಉದ್ಘಾಟಿಸಿ ಮಾತನಾಡಿದ 28 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ದೀಪಕ ಜಿಂದಾಲ್, ಎನ್​ಸಿಸಿ ಕೆಡೆಟ್​ಗಳಿಗೆ ಶಿಸ್ತು ಮುಖ್ಯವಾದದ್ದು. ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಇರಬೇಕು. ಹತ್ತು ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ಅಗತ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.

ವಿವಿಧ ಶಾಲಾ-ಕಾಲೇಜುಗಳ ಸುಮಾರು 500 ಕೆಡೆಟ್​ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಶಸ್ತ್ರಾಸ್ತ್ರ ತರಬೇತಿ, ನಕಾಶೆ ಓದುವುದು, ಫಿಲ್ಡ್ ಕ್ರಾಫ್ಟ್, ಬ್ಯಾಟಲ್ ಕ್ರಾಫ್ಟ್, ರಾಷ್ಟ್ರೀಯ ಏಕೀಕರಣ, ವಿಪತ್ತು ನಿರ್ವಹಣೆ, ಸೈಬರ್ ಭದ್ರತೆ, ಅಗ್ನಿಶಾಮಕ ಮತ್ತಿತರ ವಿಷಯಗಳ ಕುರಿತು ವಿವಿಧ ಮಿಲಿಟರಿ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ.

ಸುಬೇದಾರ ಮೇಜರ್ ಕುಷ್ ಬೋರಗಲ್ಲೆ, ಲೆಫ್ಟಿನೆಂಟ್ ಕರ್ನಲ್ ಎಸ್.ಪಿ. ದೇಸಾಯಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net