ಅಟಲ್ಜೀ ಅಭಿವೃದ್ಧಿಯ ಚಿಂತಕ

Atalji is a thinker of development.
ವಿಜಯಪುರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿರುವ ಪ್ರತಿಮೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುಷ್ಪಾರ್ಚನೆ ಸಲ್ಲಿಸಿದರು. ರಾಜೇಶ ದೇವಗಿರಿ, ಶಂಕರ ಹೂಗಾರ, ಚಂದು ಚೌದರಿ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರದ ಅಭಿವೃದ್ಧಿಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕರು ನಮ್ಮ ಹೆಮ್ಮೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬುಧವಾರ ನಗರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಭಾರತ ದೇಶದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ರವರ 100ನೇ ಜನ್ಮದಿನದ ಹಿನ್ನೆಲೆ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ವಾಜಪೇಯಿ ಅವರು ಅಭಿವೃದ್ಧಿ ಮೂಲಕ ದೇಶದ ಚಿತ್ರಣವೇ ಬದಲಿಸಿದ್ದಾರೆ ಎಂದು ತಿಳಿಸಿದರು.

ವಾಜಪೇಯಿ ಅವರು ರಾಷ್ಟ್ರ ಕಂಡ ಅಪ್ರತಿಮ ವಾಕ್ಪಟು, ಅಜಾತುಶತ್ರು, ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಬದಲಾವಣೆ ತಂದವರು. ಭಾರತೀಯ ಜನತಾ ಪಕ್ಷಕ್ಕೆ ಹಾಗೂ ದೇಶ ಭಕ್ತರಿಗೆ ಬಹಳ ಅಭಿಮಾನ ಪಡುವ ಹೆಮ್ಮೆಯ ದಿವಸ ಅಟಲ್ ಜನ್ಮ ದಿನ. ಅವರು ನೀಡಿರುವ ಅತ್ಯುತ್ತಮ ಆಡಳಿತಕ್ಕಾಗಿ, ಜನ್ಮ ದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ನಂತರ ಸ್ಥಳೀಯ ಸಾರ್ವಜನಿಕರ ಅಹವಾಲು ಆಲಿಸಿದರು. ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ರಾಜಶೇಖರ ಕುರಿಯವರ, ವಿಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಸದಾಶಿವ ಗುಡ್ಡೋಡಗಿ, ರಾಜೇಶ ದೇವಗಿರಿ, ಮಲಕಪ್ಪ ಗಾಣಿಗೇರ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಸಂತೋಷ ಪಾಟೀಲ, ಚಂದ್ರು ಚೌದರಿ, ದತ್ತಾ ಗೊಲಾಂಡೆ, ಬಸವರಾಜ ಗೊಳಸಂಗಿ, ಸಂತೋಷ ತಳಕೇರಿ, ಪ್ರಕಾಶ ಚವ್ಹಾಣ, ರಾಜಲಕ್ಷ್ಮಿ ಪರ್ವತ್ತನವರ, ಶಕುಂತಲಾ ಕುರ್ಲೆ, ಭಾರತಿ ಶಿವಣಗಿ, ಬಸವರಾಜ ಲವಗಿ, ವಿಜು ಗಜ್ಜಿನಕಟ್ಟಿ, ಮೋಯಿನ್ ಗೋಲೆವಾಲೆ, ಉಮೇಶ ವೀರಕರ, ರಮೇಶ ಪಡಸಲಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net