

ಬೆಳಗಾವಿ: ಅಟಲ್ ಜೀ ಜನ್ಮಶತಮಾನೋತ್ಸವ ಅಭಿಯಾನ-2025 ಅಂಗವಾಗಿ ಅಟಲ್ ಜೀ ಅವರೊಂದಿಗೆ ಒಡನಾಟ ಹೊಂದಿದ್ದ ರಾಜ್ಯದ ಬಿಜೆಪಿ ಹಿರಿಯ ಕಾರ್ಯಕರ್ತ ಎಂ.ಬಿ. ಝಿರಲಿ ಅವರನ್ನು ಬೆಳಗಾವಿಯ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೋಣಿ, ಈರಯ್ಯ ಖೋತ, ಉತ್ತರ ಮಂಡಳ ಪ್ರಧಾನ ಕಾರ್ಯದರ್ಶಿ ಅಶೋಕ ತೋರಾಟ, ವಿನೋದ ಲಂಗೋಟಿ, ಮಹಾನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕೆಕರೆ, ಪ್ರಧಾನ ಕಾರ್ಯದರ್ಶಿ ಶೀಲಾ ಗಡಕರಿ, ಬೆಳಗಾವಿ ಮಹಾನಗರ ಜಿಲ್ಲಾ ಉಸ್ತುವಾರಿ ರಮೇಶ ದೇಶಪಾಂಡೆ ಇದ್ದರು.