ಅಟಲ್ ಭೂ ಜಲ್ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ

Atal bhoo yojane photo -3
Published on

ಗದಗ: ಅಟಲ್ ಭೂಜಲ ಯೋಜನೆ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ ನೋಡಲ್ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವ ಬ್ಯಾಂಕಿನ ನೆರವಿನ ಪಾಲುದಾರಿಕೆಯಲ್ಲಿ ಗದಗ ಜಿಲ್ಲೆಯಲ್ಲಿ ಅಟಲ್ ಭೂಜಲ್ ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಅನುಷ್ಟಾನ ಪಾಲುದಾರರಿಗೆ ಇತ್ತೀಚೆಗೆ ಗದಗ ಜಿಲ್ಲಾ ನೋಡಲ್ ಅಧಿಕಾರಿಗಳ ಕಾರ್ಯಾಲಯ ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕ ಅಟಲ್ ಭೂಜಲ ಯೋಜನೆ, ಗದಗ ಕಛೇರಿಯಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು,

ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಅಟಲ್ ಭೂಜಲ ಯೋಜನೆಯ ಪರಿಸರ ತಜ್ಞರಾದ ಕಿರಣ್ ಕಾಶಿನಾಥ ಕೇರಿ  ಉದ್ಘಾಟಿಸಿ ಅಟಲ್ ಭೂಜಲ್ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದರು. ಅಂತರ್ಜಲ ಸದ್ಬಳಕೆ, ಪ್ರಕೃತಿ ನಮಗಾಗಿ ಭೂ ಗರ್ಭದಲ್ಲಿ ಭದ್ರವಾಗಿ ಕೂಡಿಟ್ಟಿರುವ “ಜೀವ ಜಲ” ಈ ಜೀವ ಜಲವನ್ನು ಹಿತಮಿತವಾಗಿ ಬಳಸಿದರೆ ಮಾತ್ರ, ಭವಿಷ್ಯದ ಪೀಳಿಗೆಗೂ ಉಳಿಸಬಹುದು. ಅದಕ್ಕಾಗಿ, ಕೊಳವೆಬಾವಿ ಸೇರಿದಂತೆ ಅಂತರ್ಜಲ ಬಳಸಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವವರು ಸೂಕ್ಷ್ಮ ನೀರಾವರಿ ಪದ್ದತಿಗಳಾದ ತುಂತುರು ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಅವಶ್ಯಕ ಹಾಗೂ ಬಳಕೆ ಮಾಡುವುದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಭೂಮಿಗೆ ಮರುಪೂರಣ ಮಾಡಬೇಕಾಗಿರುವುದು ಅತೀ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನೀಯರ್  ನಾಗಶೆಟ್ಟಿ ಚಂದ್ರಶೇಖರ್ ಅಟಲ್ ಭೂಜಲ ಯೋಜನೆ ಗದಗ, ಅಟಲ್ ಭೂಜಲ ಯೋಜನೆಯ   ದಿನೇಶ ಎಚ್ ಪಾಟೀಲ್ ಅಂತರ್ಜಲ ತಜ್ಞರು,   ಶಿವಕುಮಾರ ಟಿ. ಎಚ್. ಕೃಷಿ ತಜ್ಞರು,   ಕೋಟ್ರೇಶ ಎಚ್.ಎಮ್ ಮಾಹಿತಿ ಮತ್ತು ಶಿಕ್ಷಣ ಸಂವಹನ ತಜ್ಞರು, ಸಿಬ್ಬಂಧಿಯವರು ಹಾಗೂ ಬಾಗಲಕೋಟಿ ಜಿಲ್ಲೆಯ ಡಿ.ಪಿ.ಎಂ.ಯು ಅಟಲ್ ಭೂಜಲ ಯೋಜನೆಯ   ಸಮರ್ಥ್ ಗೊಬ್ಬರ್ ಅಂತರ್ಜಲ ತಜ್ಞರು,    ತಿಮ್ಮನಗೌಡ ಪಾಟೀಲ ಕೃಷಿ ತಜ್ಞರು, ಶ್ರೀಮತಿ ಮಂಜುಳಾ ಮೇಡಮ್ ಮಾಹಿತಿ ಮತ್ತು ಶಿಕ್ಷಣ ಸಂವಹನ ತಜ್ಞರು ಮತ್ತು ಅಟಲ್ ಭೂಜಲ ಯೋಜನೆಯ ಜಿಲ್ಲಾ ಪಾಲುದಾರ ಸಂಸ್ಥೆಯಾದ ನಿವೇದಿತ ಮಹಿಳಾ ವಿವಿದ್ದೊದ್ದೇಶ ಸಂಘ ಧಾರವಾಡ, ಜಿಲ್ಲಾ ಪಾಲುದಾರ ಸಂಸ್ಥೆ ಆರ್.ಡಿ.ಎಸ್ ಇವರ ಸಿಬ್ಬಂದಿಯವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net