ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ಜನ್ಮದಿನಾಚರಣೆ

IMG_20241225_205032_242.jpg
Published on

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಅಜಾತಶತ್ರು ಮಾಜಿ ಪ್ರಧಾನಮಂತ್ರಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನವನ್ನು ಸುಶಾಶನ ದಿನವಾಗಿ ಆಚರಿಸಲಾಯಿತು.

ಬಿಜೆಪಿ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ ಮಾತನಾಡಿ, ಜನ ಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಟಲ್ ಜೀ, ದೇಶ ಕಂಡ ಅಪ್ರತಿಮ ನಾಯಕ, ದೇಶಭಕ್ತ. 14 ಪಕ್ಷಗಳನ್ನು ಒಗ್ಗೂಡಿಸಿ ದೇಶದ ಪ್ರಧಾನಿಯಾಗಿ ರಾಷ್ಟ್ರೀಯ ನೀತಿ ಮತ್ತು ಆಡಳಿತದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದರು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರ ಮೆಚ್ಚಿದ ಜನ ನಾಯಕ. ಸ್ವಚ್ಛ ಹಾಗೂ ದಕ್ಷ ಆಡಳಿತಗಾರರಾಗಿ ಅವರ ಅವಧಿಯಲ್ಲಿ ದೇಶದಲ್ಲಿ ಅನೇಕ ಚಾರಿತ್ರಿಕ ನಿರ್ಧಾರಗಳನ್ನು ಪ್ರಕಟಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಅವರ ದಿಟ್ಟ ಆಡಳಿತ ನಿರ್ಧಾರಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯ ಸಂತೋಷ ಚವಾಣ, ನಾರಾಯಣ ಜರತಾರ್ಘರ, ಜಿಲ್ಲಾ ಮಾಧ್ಯಮ ವಕ್ತಾರ ರವಿ ನಾಯಕ, ತೋಟಪ್ಪ ನಿಡಗುಂದಿ, ರಾಜು ರ್ಜತಾಘರ, ಕಾರ್ಯಾಲಯ ಕಾರ್ಯದರ್ಶಿ ಮುರುಗೇಶ್ ಹೊರಡಿ.

ಪರಶುರಾಮ ಪೂಜಾರ, ಕೃಷ್ಣ ಗಂಡಗಾಳೇಕರ, ನವೀನ ಮಡಿವಾಳರ, ಇಂದುಮತಿ ಚೌಹಾಣ, ಲೀಲಾವತಿ ಪಾಸ್ತೆ, ಶಂಕರ ಪಾಟೀಲ, ಅವಿನಾಶ್ ಹರಿವಾಣ, ಮಹೇಶ್ ತಪೇಲಾ, ಚಂದ್ರು ಮುಶಪ್ಪನವರ್, ನಿಂಗರಾಜ್ ಮುಂದಿನಮನಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net