ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆ ಅಪಾರ

SRP_25-02jpj
ಶ್ರಿರಂಗಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವಾಜಪೇಯಿ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಡಾ.ಸಿದ್ದರಾಮಯ್ಯ ಮಾತನಾಡಿದರು.
Published on

ಶ್ರೀರಂಗಪಟ್ಟಣ: ದೇಶಾದ್ಯಂತ ಜನಸಂಘ ಕಟ್ಟುವ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ದೇಶಾದ್ಯಂತ ಸದೃಢಗೊಳಿಸಿದ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ ತಿಳಿಸಿದರು.

ವಾಜಪೇಯಿ ಅವರ ಜಯಂತಿ ಪ್ರಯುಕ್ತ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಗ್ವಾಲಿಯರ್ ಕ್ಷೇತ್ರದಿಂದ ಗೆದ್ದು ಸಂಸತ್‌ನಲ್ಲಿ ವಿರೋಧಿಗಳೂ ತಮ್ಮ ಭಾಷಣ ಕೇಳುವಂತೆ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಮಹಾ ವಾಗ್ಮಿ ವಾಜಪೇಯಿ. ಪ್ರಧಾನಿಯಾದ ಬಳಿಕ ಭಾರತವನ್ನು ಸುಭದ್ರಗೊಳಿಸಲು ಅಮೆರಿಕ ಸೇರಿದಂತೆ ವಿವಿಧ ದೇಶಗಳ ವಿರೋಧದ ನಡುವೆಯೂ ಪೋಕ್ರಾನ್ ಅಣು ಪರೀಕ್ಷೆ ನಡೆಸಿ ಶಸ್ತ್ರಾಸ್ತ್ರವನ್ನು ದೇಶದ ಬತ್ತಳಿಕೆ ಸೇರಿಸಿದರು. ಜನಪರ ಯೋಜನೆ, ಜನಾರೋಗ್ಯಕ್ಕಾಗಿ ಅವರು ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳು ಇಂದಿಗೂ ಜೀವಂತ ಎಂದು ಸ್ಮರಿಸಿದರು.

ಸಂಸತ್ತಿನಲ್ಲಿ ಎಲ್.ಕೆ.ಅಡ್ವಾಣಿ ಅವರೊಂದಿಗೆ ವಾಜಪೇಯಿ ಮಾತ್ರ ಇದ್ದರು. ಆದರೀಗ ದೇಶಾದ್ಯಂತ 21 ಕೋಟಿಗೂ ಅಧಿಕ ಕಾರ್ಯಕರ್ತರಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಅಟಲ್ ಜೀ ಅವರ ಕೊಡುಗೆ ಅಪಾರ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಚಂಡ ಗೆಲುವು ತಂಡುಕೊಡುವ ಮೂಲಕ ಅಟಲ್ ಜೀ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಮಂಡಲ ಕಾರ್ಯದರ್ಶಿ ಸಂತೋಷ್ ಕುಮಾರ್, ಶ್ರೀ ಕೃಷ್ಣರಾಜ ಸೊಸೈಟಿ ಅಧ್ಯಕ್ಷ ಕಂಠಿ ರಘು, ಮುಖಂಡರಾದ ಮೇಳಾಪುರ ಪುಟ್ಟರಾಜು, ವಿಶ್ವನಾಥ್, ಹೇಮಂತ್, ಕಿರಣ್ ಸಿಂಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net