

ವಿಜಯಪುರ : ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಶಾಲೆ ವಿದ್ಯಾರ್ಥಿಗಳು ನಗರದ ಡಾ. ಬಿ.ಆರ್. ಅಂಬೇಡ್ಕರ್ ಒಳ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಶಾಲೆಯ ಮುದ್ರಾ ಬಾಗಲಕೋಟ, ಸುಚಿತ ಗುಮಡಿ, ಸಾನಿಕಾ ಗುಣದಾಳ, ಆದ್ಯಾ ಸೋನಾರ, ವಿರೇಶ ಇಳಜೇರಿ, ನಂದೀಶ ಮೇಡಿದಾರ ಮತ್ತು ಅಬುಸುಫಿಯಾನ ಗುಡುಗುಂಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಆರಾದ್ಯಾ ಕಲ್ಯಾಣಿ, ಸೋನಾಲಿ ಗುಣದಾಳ, ಸಮನ್ವಿತಾ ಪೂಜಾರಿ, ಸ್ವಾತಿ ತಳವಾರ, ಶ್ರೇಯಸ್ ಸಿಂಧೆ ಮತ್ತು ಯಶರಾಜ ಬಜಂತ್ರಿ ದ್ವಿತೀಯ ಸ್ಥಾನ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ, ಶಾಲಾ ಆಡಳಿತಾಧಿಕಾರಿ ಡಾ. ಎಚ್ ವೆಂಕಟೇಶ, ಮುಖ್ಯ ಗುರುಮಾತೆ ಐಶ್ವರ್ಯ ಸಂಗಮ, ತರಬೇತುದಾರ ಪ್ರವೀಣಕುಮಾರ ವಠಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.