ಯಾದವಾಡದಲ್ಲಿ ರೈತ ಜಾತ್ರೆ 20ರಂದು

11MDLG1
Published on

ಮೂಡಲಗಿ: ಯಾದವಾಡ ಗ್ರಾಮದಲ್ಲಿ ಪ್ರಥಮ ಬಾರಿಗೆ ತಾಲೂಕು ಮಟ್ಟದ ನಂದಿಕೂಗೂ ಹಾಗೂ ರೈತ ಜಾತ್ರೆ ಕಾರ್ಯಕ್ರಮ ಬಿಜ್ಜರಗಿಯ ಸಿದ್ದೇಶ್ವರ ಪುಣ್ಯಾಶ್ರಮದ ಸಂಯುಕ್ತಾಶ್ರಯದಲ್ಲಿ ಜ.20ರಂದು ಗ್ರಾಮದ ಟ್ಟಿಗಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕರವೇ ಸಂಸ್ಥಾಪಕ ಕಲ್ಮೇಶ ಗಾಣಿಗಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಡೆತ್ತಿನ ಕೃಷಿ ಪುನಶ್ಚೇತನಕ್ಕಾಗಿ ಬಹು ಜನರ ಧ್ವನಿ ಕ್ರೋಢಿಕರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ, ಗೋ ಪೂಜೆ, ಕೃಷಿ ತರಿಂದ ರೈತರೊಂದಿಗೆ ಸಂವಾದ, ಶ್ರೀಗಳಿಂದ ಗೋ ರಣೆ ಉಳಿವಿಗಾಗಿ ಆಶೀರ್ವಚನ, ರೈತ ಮಿತ್ರ ಕಿರು ನಾಟಕ ಕಾರ್ಯಕ್ರಮ ಜರುಗಲಿವೆ ಎಂದರು.

ಕೊಲ್ಲಾಪುರದ ಕನ್ಹೇರಿ ಮಠದ ಅದಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಜ.20ರಂದು ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಜತೆಗೆ ಆಕಳುಗಳು ಹಾಗೂ ವಿವಿಧ ಜಿಲ್ಲೆಗಳಿಂದ 250 ಜೋಡೆತ್ತುಗಳ ಮೆರವಣಿಗೆ ಜರುಗಲಿದೆ ಆದರಿಂದ ತಾಲೂಕಿನ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ರೈತ ಮುಖಂಡರಾದ ಹನುಮಂತ ಅಮಲಝರಿ, ಗುರುನಾಥ ರಾಮದುರ್ಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net