

ತಾವರಗೇರಾ ;ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಮಾಜಿ ಸಿಎಂ ಡಿ.ದೇವರಾಜ ಅರಸು ಜನ್ಮ ದಿನವನ್ನು ಸದ್ಭಾವನಾ ದಿನವನ್ನಾಗಿ ಭಾನುವಾರ ಆಚರಿಸಲಾಯಿತು.
ಪಪಂ ಮುಖ್ಯಾಧಿಕಾರಿ ನಬಿಸಾಬ ಖುದನವರ ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ಅಬ್ದುಲ್ ಖಾದರ್ , ಶಾಮೂರ್ತಿ ಕಟ್ಟಿಮನಿ ಶರಣಬಸವ ಸೈಂದರ , ಮರೇಶ , ಖಾಜೋಹುಸೇನ ಇದ್ದರು.
ಕರ್ನಾಟಕ ಪಬ್ಲಿಕ್ ಸ್ಕೂಲ್: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ದೇವರಾಜ ಅರಸು ಜನ್ಮ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಪರಸಪ್ಪ ಹೊಸಮನಿ ದೇವರಾಜ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಶಿಕ್ಷಕ ಶಾಮಣ್ಣ ಉಪ್ಪಾರ್, ಹನಮಂತಪ್ಪ ಸಿರಿಣಾಕಿ, ದೊಡ್ಡಪ್ಪ ಅಲಬನೂರ ಇದ್ದರು.
ಇದನ್ನೂ ಓದಿ: ಹಿಂದುಳಿದ ವರ್ಗಗಳಿಗಾಗಿ ಶ್ರಮಿಸಿದ ನಾಯಕ ಅರಸು
ನಾಡ ಕಚೇರಿ: ಪಟ್ಟಣದ ನಾಡ ಕಚೇರಿಯಲ್ಲಿ ಉಪ ತಹಶೀಲ್ದಾರ್ ಶರಣಬಸವೇಶ ಅರಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಚೇರಿಯ ವಿಷಯ ನಿರ್ವಾಹಕ ಶ್ರೀಶೈಲ ಮಲ್ಲಿಕಾರ್ಜುನ , ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ, ಚನ್ನಬಸವ ಪುರ ಇದ್ದರು