ಉದ್ಯಾನದ ಮುಖ್ಯದ್ವಾರದಲ್ಲೇ ನಂದಿನಿ ಕೇಂದ್ರ

IMG_20241022_140744
ಉದ್ಯಾನವನದ ಆವರಣದಲ್ಲಿರುವ ನಂದಿನಿ ಕ್ಷೀರ ಕೇಂದ್ರದ ಅಂಗಡಿ.
Published on

ಹೊಳೆನರಸೀಪುರ: ಮಹಾತ್ಮ ಗಾಂಧಿ ಉದ್ಯಾನದ ಮುಖ್ಯದ್ವಾರದಲ್ಲೇ ಹೊಂದಿಕೊಂಡಂತೆ ನಂದಿನಿ ಕೇಂದ್ರ ತೆರೆಯಲಾಗಿದೆ.

ಪಾರ್ಕ್‌ನ ಜಾಗದಲ್ಲಿ ನಂದಿನಿ ಕ್ಷೀರ ಕೇಂದ್ರವನ್ನು ಯಾವ ಮಾನದಂಡದ ಮೇಲೆ ನಿರ್ಮಿಸಿದ್ದಾರೆ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪಾರ್ಕ್ ಅಭಿವೃದ್ಧಿ ಕಡೆಗಣಿಸಿ ಟೀ, ಕಾಫಿ, ಹಾಲು ಉತ್ಪನ್ನಗಳ ಮಾರಾಟ ಮಾಡುವ ಕೇಂದ್ರವನ್ನ ಪಾರ್ಕ್ ಜಾಗದಲ್ಲೇ ನಿರ್ಮಿಸಲು ಅವಕಾಶ ಮಾಡಿಕೊಟ್ಟಿರುವುದು ಪುರಸಭೆ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net