ಕ್ರೀಡಾಕೂಟದಲ್ಲಿ ದೇವದುರ್ಗ ಉತ್ತಮ ಸಾಧನೆ

23 DVD 03
ರಾಯಚೂರಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ಗಲಗ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಭೀಮೇಶ ಮಲ್ಲಯ್ಯ ರವಿಚಂದ್ರ ಗೊಲ್ಲಾಳಪ್ಪ ಪ್ರಥಮಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ತಿಮ್ಮಣ್ಣ, ಶಂಕರಗೌಡ ಇದ್ದರು.
Published on

ದೇವದುರ್ಗ: ರಾಯಚೂರು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ತಾಲೂಕಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕಿನ ಮುಷ್ಟೂರು ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 200ಮೀ ಓಟದಲ್ಲಿ ರೋಹಿಣಿ ಬಸವರಾಜ ಪ್ರಥಮ ಸ್ಥಾನ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯಸ್ಥಾನ ಪಡೆದಿದ್ದಾರೆ. ಉದ್ದಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ರಾಹುಲ್ ಉತ್ತಮ ಸಾಧನೆ ಮಾಡಿದ್ದಾನೆ ಎಂದು ಮುಖ್ಯಶಿಕ್ಷಕ ಆನಂದ ನಾಯಕ ತಿಳಿಸಿದ್ದಾರೆ.

ಗುಂಡು ಎಸೆತ ವಿಭಾಗದಲ್ಲಿ ಗಲಗ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಭೀಮೇಶ ಮಲ್ಲಯ್ಯ ಪ್ರಥಮ ಸ್ಥಾನ ಪಡೆದರೇ ಅದೇ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ರವಿಚಂದ್ರ ಗೊಲ್ಲಾಳಪ್ಪ ಗುಂಡು ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ತಿಮ್ಮಣ್ಣ ತಿಳಿಸಿದ್ದಾರೆ. ಹಿರೇರಾಯಕುಂಪಿ ಪ್ರೌಢಶಾಲೆ ವಿದ್ಯಾರ್ಥಿ ಎಂ.ಡಿ.ಮುಸ್ತಾಫ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇನ್ನು ರಾಜಲಬಂಡ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಶ್ವಿನಿ ವಿಜಯಕುಮಾರ ಪಾಟೀಲ್ ಎತ್ತರ ಜಿಗಿತದಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ. ಅರಕೇರಾ ಪ್ರೌಢಶಾಲೆ ವಿದ್ಯಾರ್ಥಿಗಳು ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು 3ಸಾವಿರ ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ಇದೇ ಶಾಲೆ ವಿದ್ಯಾರ್ಥಿ ಐಶ್ವರ್ಯ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net