ಕೇಂದ್ರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು

17Manjari10
ಅಂಕಲಿ ಗ್ರಾಮದಲ್ಲಿ ಮೇ ಧರನಾಯಕ್ ಇಂಡಿಯನ್ ಗ್ರಾಮೀಣ ವಿತರಕ ನೂತನ ಕಟ್ಟಡವನ್ನು ಸಸಿಗೆ ನೀರು ಹಾಕಿ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು. ಸುರೇಶ್ ಪಾಟೀಲ, ವಿವೇಕ ಕಾಮತೆ, ಸಂಜೆಯ ಚೌಧರಿ ಇತರರಿದ್ದರು.
Published on

ಮಾಂಜರಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಗುರುವಾರ ಇಂಡಿಯನ್ ಆಯಿಲ್ ಕಂಪನಿಯ ಇಂಡಿಯನ್ ಮೇ ಧರನಾಯಿಕ್ ಇಂಡಿಯನ್ ಗ್ರಾಮೀಣ ವಿತರಕ ನೂತನ ಕಟ್ಟಡ ಉದ್ಘಾಟಿಸಿ, ನಾಮಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಯೋಜನೆ ಜಾರಿಗೆ ತಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಲಿದ್ದಾರೆ. ಅದಕ್ಕಾಗಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕೆಂದರು.

ಈ ವೇಳೆ ಲಾನುಭವಿಗಳಿಗೆ ಕೇಂದ್ರ ಸರ್ಕಾರದ ಉಜ್ವಲ ಗ್ಯಾಸ್ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು. ಗ್ರಾಪಂ ಸದಸ್ಯ ಸುರೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಗ್ರಾಪಂ ಸದಸ್ಯರಾದ ತುಕಾರಾಮ ಪಾಟೀಲ, ವಿವೇಕ ಕಾಮತೆ, ವಿಕಾಸ ಪಾಟೀಲ, ಅಣ್ಣಪ್ಪ ಹರಕೆ, ಗ್ರಾಪಂ ಉಪಾಧ್ಯಕ್ಷೆ ಲತಾ ಬುಬನಾಳೆ ಆಗಮಿಸಿದ್ದರು. ಶೀಲ ಹಲವಾಯಿ, ಪಾರ್ವತಿ ಧರನಾಯಕ, ನಾಗಪ್ಪ ಧರನಾಯಕ, ನಿರಂಜನ ಧರನಾಯಕ, ಯಲ್ಲಪ್ಪ ಧರನಾಯಕ, ಸಂಜಯ ಚೌಧರಿ, ತಿಪ್ಪಣ್ಣ ಕುರಿ, ಮಂಜುನಾಥ ಕುರಿ, ಬಾಲಚಂದ್ರ ತಳಕೇರಿ ಇತರರಿದ್ದರು. ರಾಘವೇಂದ್ರ ಲಂಬುಗೋಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net