

ರಾಯಬಾಗ: ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಿಸಿದ್ದು, ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಭಾವನಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ ಮತ್ತು ಭಿರಡಿ ಗ್ರಾಮಗಳ ಪ್ರವಾಹ ಪರಿಸ್ಥಿತಿಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು. ತಹಸೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಕೃಷ್ಣಾ ನದಿಗೆ ಮಹಾರಾಷ್ಟ್ರ ನದಿಗಳಿಂದ ನೀರು ಬಿಡುತ್ತಿರುವುದರಿಂದ ನದಿತೀರದ ಜನರ ಸುರಕ್ಷೆಗಾಗಿ ತಾಲೂಕಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದರು.
ತಾಪಂ ಇಒ ಅರುಣ ಮಾಚಕನೂರ, ಕೃಷಿ ಅಧಿಕಾರಿ ವಿನೋದ ಮಾವರಕರ, ಪಶು ಅಧಿಕಾರಿ ಡಾ.ಎಂ.ಬಿ.ಪಾಟೀಲ, ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ರವಿ ಚೌಗುಲೆ, ತಾತ್ಯಾಸಾಬ ಕಾಟೆ, ಧೂಳಗೌಡ ಪಾಟೀಲ, ಮಹಾವೀರ ಪಾಟೀಲ, ಮಹಾದೇವ ಗಂಗಾಯಿ, ಮಲ್ಲಪ್ಪ ಮೈಶಾಳೆ, ಸತ್ಯಪ್ಪ ಐನಾಪುರೆ, ಅಪ್ಪಾಸಾಬ ಮೈಶಾಳೆ, ಗಂಗಾಧರ ಮೈಶಾಳೆ, ಪ್ರಕಾಶ ಮೀರ್ಜೆ, ಅನಿಲ ಹಂಜೆ, ಬಸವರಾಜ ಡೋಣವಾಡೆ, ಭೋಲಾ ಕಡಾಳೆ, ಸೋಮಶೇಖರ ಜೊರೆ, ನಾಗರಾಜ ಪತ್ತಾರ ಇತರರಿದ್ದರು.