ಶಾಲೆಯಲ್ಲಿ ಅಡುಗೆ ಅನಿಲ ಸೋರಿಕೆ

Gas Leakage
Published on

ಮೂಡಲಗಿ: ತಾಲೂಕಿನ ಜೋಕಾನಟ್ಟಿ ಗ್ರಾಮದ ಯೋಗಿಸಿದ್ದೇಶ್ವರ ತೋಟದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಬೆಂಕಿ ಹೊತ್ತಿರುವ ಟನೆ ಶುಕ್ರವಾರ ಸಂಭವಿಸಿದ್ದು, ಶಿಕರು ಹಾಗೂ ಸ್ಥಳಿಯರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಅಡುಗೆ ಕೋಣೆಯಲ್ಲಿ ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಕಟ್ಟಡ ಹಾಗೂ ಅಡುಗೆ ಸಾಮಾಗ್ರಿಗಳಿಗೆ ಬೆಂಕಿ ತಗುಲಿತು. ತಕ್ಷಣ ಅಡುಗೆ ಸಿಬ್ಬಂದಿ ಹೊರಗೆ ಬಂದಿದ್ದಾರೆ. ಅಲ್ಲಿದ್ದ ಸ್ಥಳಿಯರು ಚೀಲದ ತಟ್ಟು ನೀರಲ್ಲಿ ಅದ್ದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಶಾಲೆಯಿಂದ ಹೊಗೆ ಬರುವುದನ್ನು ಗಮನಿಸಿದ ಶಿಕರು ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿ, ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಸ್ಥಳಕ್ಕೆ ಬಿಇಒ ಅಜಿತ್​ ಮನ್ನಿಕೇರಿ, ಪಿಎಸ್​ಐ ರಾಜು ಪೂಜೇರಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net