

ವಿಜಯಪುರ: ತಾಲೂಕಿನ ಕವಲಗಿ ಗ್ರಾಮದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.
ಸಿ ರೋಗ ತೆ ಡಾ. ಅಶ್ವಿನಿ ಯಂಡಿಗೇರಿ ಮಾತನಾಡಿ, ಹದಿಹರೆಯದ ಬಾಲಕಿಯರಲ್ಲಿ ಋತುಚಕ್ರದ ಸಮಯದ ಶುಚಿತ್ವದ ಬಗ್ಗೆ ಪೂರಕ ಸಲಹೆ ನೀಡುವ ಜತೆಗೆ ಸುರತ ಸ್ಪರ್ಶ ಮತ್ತು ಅಸುರತ ಸ್ಪರ್ಶದ ಕುರಿತು ಜಾಗೃತಿ ಮೂಡಿಸಿದರು.
ಶಾಲಾ ಪ್ರಾಚಾಯೆರ್ ಶರ್ಮಿಳಾ ಹೇಮಂತ್ ಮಾತನಾಡಿ, ಮಹಿಳೆಯರು ಕೆಲ ವಿಚಾರಗಳಲ್ಲಿ ಪುರುಷರಿಗಿಂತ ಮಿಗಿಲು ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ನಂತರ ಸಂಸ್ಥೆ ವತಿಯಿಂದ ವೈದ್ಯೆ ಡಾ. ಅಶ್ವಿನಿ ಯಂಡಿಗೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೇಯಾ ಡಿ. ಸ್ವಾಗತಿಸಿದರು. ತನುಶ್ರೀ ಎಚ್. ವಂದಿಸಿದರು.