ನಯಾನಗರದಲ್ಲಿ ಬಸ್‌ಗೆ ಕಲ್ಲು

4BLH11
ಬಸ್‌ನ ಗಾಜು ಒಡೆದಿರುವುದು.
Published on

ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡದ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್‌ಗೆ ಕಲ್ಲು ತೂರಿದ್ದಾರೆ. ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಬರುತ್ತಿದ್ದ ಬಸ್ ನಿಲ್ಲಿಸದ್ದರಿಂದ ವಿದ್ಯಾರ್ಥಿಗಳು ಬಸ್ಸ್‌ಗೆ ಕಲ್ಲು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕ ಬಸ್ ರಸ್ತೆಯ ಮೇಲೆಯೇ ನಿಲ್ಲಿಸಿದ್ದರಿಂದ ಕಿಲೋಮಿಟರ್ ಉದ್ದಕ್ಕೂ ವಾಹನ ದಟ್ಟಣೆಯಾಗಿ ಸಂಚಾರಕ್ಕೆ ಕೆಲ ಕಾಲ ಅಸ್ತವ್ಯಸ್ತಗೊಂಡಿತು. ವಿದ್ಯಾರ್ಥಿಗಳು, ಬಸ್ ಚಾಲಕ, ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾದ ಸುದ್ದಿ ತಿಳಿದ ತಕ್ಷಣ ಪೊಲೀಸರು ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net