5 ತಿಂಗಳಾದರೂ ಮುಗಿಯದ ಕಾಮಗಾರಿ

11 KTL 01
ಬಾಗಲವಾಡದ ಮುಖ್ಯ ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿರುವುದು.
Published on

ಕವಿತಾಳ: ಸಮೀಪದ ಬಾಗಲವಾಡ ಗ್ರಾಮದಲ್ಲಿ ಮಳೆ ಬಂದರೆ ಮುಖ್ಯರಸ್ತೆಯಲ್ಲೇ ನೀರು ನಿಲ್ಲುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಗುರುವಾರ ಸುರಿದ ಮಳೆಗೆ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದು ಶಾಲಾ ವಾಹನ, ಬೈಕ್ ಸವಾರರು ಸುತ್ತುಬಳಸಿ ಬೇರೆ ಮಾರ್ಗದಲ್ಲಿ ಓಡಾಡುವಂತಾಗಿದೆ.

ಗ್ರಾಮದಲ್ಲಿ ಕೈಗೊಳ್ಳಲಾದ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಕ್ಕೆ ಐದು ತಿಂಗಳ ಹಿಂದೆ ಚಾಲನೆ ನೀಡಲಾಗಿದೆ. ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರಸ್ತೆಯಲ್ಲಿ ಮಳೆ ನೀರು ನಿಂತು ಸಮಸ್ಯೆಯಾಗುತ್ತಿದೆ. ಕೆಲದಿನಗಳ ಹಿಂದೆ ರಸ್ತೆಯಲ್ಲಿ ಬೃಹತ್ ವಾಹನ ಸಿಲುಕಿತ್ತು. ಜೆಸಿಬಿಯಿಂದ ವಾಹನವನ್ನು ಹೊರತೆಗೆಯಲಾಗಿತ್ತು.

ಈ ತಿಂಗಳು ಶಾಲಾ ವಾಹನ ರಸ್ತೆ ಮಧ್ಯೆ ಸಿಲುಕಿಕೊಂಡು ವಿದ್ಯಾರ್ಥಿಗಳು ಪರದಾಡಿದ್ದರು.ಕವಿತಾಳದಿಂದ ಮಾನ್ವಿಗೆ ಸಂಪರ್ಕ ಕಲ್ಪಿಸುವ ಬಾಗಲವಾಡ ರಸ್ತೆ ಕಾಮಗಾರಿಯನ್ನು ಬೇಗ ಮುಗಿಸಬೇಕೆಂದು ಗ್ರಾಮಸ್ಥರಾದ ಅಮರೇಶ ದೇಸಾಯಿ, ಚನ್ನಪ್ಪ, ಹುಸೇನಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net