ಕಳ್ಳತನ ಮಾಡಿದ ಇಬ್ಬರು ಅಪರಾಧಿಗಳಿಗೆ ಜೈಲು

High court logo
Published on

ರಾಣೆಬೆನ್ನೂರ: ಮನೆಯಲ್ಲಿನ ಬೆಳ್ಳಿ ಕಳ್ಳತನ ಮಾಡಿದ್ದ ಇಬ್ಬರು ಅಪರಾಧಿಗಳಿಗೆ 2 ವರ್ಷ ಜೈಲು ಶಿೆ ಹಾಗೂ ತಲಾ ಒಬ್ಬರಿಗೆ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 2ನೇ ಜೆಎಂಎ್​ಸಿ ನ್ಯಾಯಾಲಯದ ನ್ಯಾಯಾದೀಶ ಮಂಜುನಾಥ ಎಂ.ಎಸ್​. ಮಂಗಳವಾರ ಆದೇಶಿಸಿದ್ದಾರೆ.
ಹಾವೇರಿ ನಗರದ ದನ್ಯಕುಮಾರ ಅರಸನಾಳ (38) ಹಾಗೂ ಮಂಜುನಾಥ ಮರಿಯಪ್ಪ (38) ಶಿೆಗೊಳಗಾದ ಅಪರಾಧಿಗಳು.
ಇವರು 2018ರಲ್ಲಿ ಇಲ್ಲಿಯ ವಾಗೀಶ ನಗರದಲ್ಲಿ ಮನೆಯೊಂದರ ಬೀಗ ಮುರಿದು ಒಳಗೆ ನುಗ್ಗಿ 380 ಗ್ರಾಂ ಬೆಳ್ಳಿ ಕಳ್ಳತನ ಮಾಡಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್​ಐ ಸಂತೋಷಕುಮಾರ ಪಾಟೀಲ ಹಾಗೂ ಸಿದ್ಧಾರೂಢ ಬಡಿಗೇರ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸಾಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾದೀಶರು ಶಿೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ ಎಸ್​.ಎಂ. ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net