ಆರೂಢ ಮಠದಲ್ಲಿ ಸಿದ್ಧಾರೂಢ ರಥೋತ್ಸವ

30ITAGI1
Published on

ಇಟಗಿ: ಸಮೀಪದ ಚಿಕ್ಕ ಮುನವಳ್ಳಿಯ ಆರೂಢ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 130ನೇ ಶಿವಾನುಭವ ಹಾಗೂ ಪಲ್ಲಕ್ಕಿ ಉತ್ಸವದ ಧರ್ಮಸಭೆಯಲ್ಲಿ 2025ರ ೆ.1ರಿಂದ 4ರ ವರೆಗೆ ಜರುಗುವ ಜಗದ್ಗುರು ಸಿದ್ಧಾರೂಢ ಮಹಾರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಠದ ಪೀಠಾಧಿಪತಿ ಶಿವಪುತ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಭಾರತೀಯರಲ್ಲಿ ಶುದ್ಧ ಭಕ್ತಿ ಇರುವುದರಿಂದ ಜಾತ್ರೆಯಂತಹ ಕಾರ್ಯಗಳು ವೆಭವದಿಂದ ನಡೆಯುತ್ತಿವೆ. ಸದಾಶಿವಾನಂದ ಸ್ವಾಮೀಜಿ 15ನೇ ವರ್ಷದ ಪುಣ್ಯಸ್ಮರಣೆ ಹಾಗೂ 45ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್​ ಮತ್ತು ಸಿದ್ಧಾರೂಢ ಮಹಾರಥೋತ್ಸವ ಜರುಗುವುದು. ವಾರಕರಿ ಸಮಾವೇಶ ಸೇರಿ ಶ್ರೀಗಳ ತುಲಾಭಾರ. ತೊಟ್ಟಿಲೋತ್ಸವ ಹಾಗೂ ಶ್ರೀಮಠದಿಂದ ಆರೂಢ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವಪುತ್ರ ಸ್ವಾಮೀಜಿ ಹೇಳಿದರು. ಜಗದೀಶ ಶರಣರು, ಕಲ್ಲಪ್ಪ ತೋರೋಜಿ, ಮಹಾಂತೇಶ ಗದಾಡಿ, ಕೇಮಾಜಿ ಬಡಿಗೇರ, ಬಸನಗೌಡ ಪಾಟೀಲ, ಶಾಂತಿನಾಥ ಪಾಟೀಲ, ನಿಂಗಪ್ಪ ಜಾಧವ, ಬಿಷ್ಠಪ್ಪ ಬನೋಶಿ, ವಿಠ್ಠಲ ಪದ್ಮಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net