

ಉಪ್ಪಿನಂಗಡಿ: ಬಂಟ್ವಾಳ ತಾಲೂಕು ತುಂಬೆಯ ರಾಮಲ್ ಕಟ್ಟೆ ಎಂಬಲ್ಲಿ ಭಾನುವಾರ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಾಣಸ್ನೇಹಿತರಾಗಿದ್ದ ಆಶಿಕ್(21) ಹಾಗೂ ಚೇತನ್(21) ಅಂತ್ಯಸಂಸ್ಕಾರ ಸೋಮವಾರ ಉಪ್ಪಿನಂಗಡಿಯಲ್ಲಿ ಜತೆಯಾಗಿಯೇ ನೆರವೇರಿತು.
ಉಪ್ಪಿನಂಗಡಿಯ ಮಮತಾ ಶೆಟ್ಟಿ ಎಂಬುವರ ಪುತ್ರ ಆಶಿತ್‌ಮೃತದೇಹವನ್ನು ನಟ್ಟಿಬೈಲಿನ ಮನೆಯಿಂದ ಉಪ್ಪಿನಂಗಡಿಯ ಸ್ಮಶಾನಕ್ಕೆ ತರಲಾಯಿತು.
ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ದಿ. ಧರ್ಣಪ್ಪ ಪೂಜಾರಿ ಅವರ ಪುತ್ರ ಚೇತನ್ ಮೃತದೇಹವನ್ನೂ ಉಪ್ಪಿನಂಗಡಿ ಸ್ಮಶಾನಕ್ಕೆ ತಂದು, ಇಬ್ಬರ ಮೃತದೇಹದ ಅಂತ್ಯಕ್ರಿಯೆಯನ್ನು ಒಟ್ಟಿಗೇ ಏಕಕಾಲದಲ್ಲಿ ನಡೆಸಲಾಯಿತು.