

ಬೈಲಹೊಂಗಲ: ಹಳೇ ಹನುಮಂತ ದೇವಸ್ಥಾನ ಅದ್ಭುತ ಕಟ್ಟಡವು ಜೀಣೋರ್ದ್ಧಾರವಾಗುತ್ತಿದೆ ಎಂದು ಜೀಣೋರ್ದ್ಧಾರ ಕಮಿಟಿ ಅಧ್ಯ ಶ್ರೀಶೆಲ ಬೋಳನ್ನವರ ಹೇಳಿದರು.
ಪಟ್ಟಣದ ಮಾರುತಿ ಗಲ್ಲಿಯಲ್ಲಿರುವ ಹಳೇ ಹನುಮಂತ ದೇವಸ್ಥಾನದ ಗರ್ಭಗುಡಿ ಬಾಗಿಲು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಸ್ಥಾನ ಮರು ನಿರ್ಮಾಣವಾಗಬೇಕೆಂಬ ಹನುಮಂತ ದೇವರ ಭಕ್ತರ ಬಹುದಿನದ ಬೇಡಿಕೆಯಂತೆ ದೇವಸ್ಥಾನದ ಕಾಮಗಾರಿ ಪ್ರಾರಂಭವಾಗಿದೆ. ಸುಮಾರು 1 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತ ತಗಲುವ ನಿರೀೆ ಇದೆ ಎಂದರು.
ಸದಾಶಿವಯ್ಯ ಪತ್ರಿಮಠ ಶಾಸ್ತ್ರಿ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಅಧ್ಯ ವಿಜಯ ಬೋಳನ್ನವರ, ಮಹಾಬಳೇಶ್ವರ ಬೋಳನ್ನವರ, ದೊಡ್ಡವಿಠ್ಠಲ ಅಂದಾನಿ, ಉಮೇಶ ಬೋಳನ್ನವರ, ದೇವೇಂದ್ರಪ್ಪ ಪೂಜೇರಿ, ಮಾರುತಿ ಪೂಜೇರಿ, ಪ್ರವಿಣ ಬೋಳನ್ನವರ, ಮಂಜುನಾಥ ಕೋಟಗಿ, ಶ್ರೀಶೆಲ ಬೋಳನ್ನವರ, ಉಮೇಶ ಪೂಜೇರಿ, ಮಹೇಶ ಪೂಜೇರಿ, ಭಗವಂತ ಬಡಿಗೇರ ಇತರರಿದ್ದರು.