

ಗೋಕರ್ಣ: ಸನಾತನ ಭಾರತೀಯ ಜ್ಯೋತಿಷ ಶಾಸ್ತ್ರ ಖಗೋಳದ ಬಗ್ಗೆ ಮತ್ತು ಗ್ರಹಗಳ ಚಲನ ವಲನಗಳ ಬಗ್ಗೆ ಅತ್ಯಂತ ನಿಖರ ಜ್ಞಾನ ಒದಗಿಸುತ್ತದೆ. ಖಗೋಳ ವೀಕ್ಷಣೆ ಹಾಗೂ ಅಧ್ಯಯನದ ಮೂಲಕ ಇವುಗಳ ವೈಜ್ಞಾನಿಕ ಪರಿಚಯ ಪಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜ್ಯೋತಿಷ ಶಾಸ್ತ್ರದ ಬಗ್ಗೆ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಖಗೋಳ ತಜ್ಞ ಡಾ. ವಸಂತ ಹೆಗಡೆ ಹೇಳಿದರು.
ಇಲ್ಲಿನ ಶ್ರೀ ರಾಮಚಂದ್ರಾಪುರ ಮಠದ ಸಾರ್ವಭೌಮ ಗುರುಕುಲಮ್ ವಿದ್ಯಾರ್ಥಿಗಳಿಗೆ ಖಗೋಳದ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.
ದೂರದರ್ಶಕದ ಮೂಲಕ ಅವರು ಗುರು, ಶುಕ್ರ, ಶನಿ,ಚಂದ್ರ ಮತ್ತಿತರ ಗ್ರಹ ಕಾಯಗಳನ್ನು ತೋರಿಸಿ ವಿವರಣೆ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರದ ಮೂಲಕ ಸಂವಾದ ನಡೆಸಿದರು. ವಿಜಯಾ ಭಟ್ಟ ಅವರು ಗುರುಕುಲಮ್ ವಿದ್ಯಾರ್ಥಿಗಳಿಗಾಗಿ ದೂರದರ್ಶಕವನ್ನು ಕೊಡುಗೆಯಾಗಿ ನೀಡಿದರು. ಗುರುಕುಲಮ್ ಶಿಕ್ಷಕರು ನಿರ್ವಹಿಸಿದರು.