

ವಿಜಯವಾಣಿ ಸುದ್ದಿಜಾಲ ಉಡುಪಿ
ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ ಅವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸಹ ಸದಸ್ಯರನ್ನಾಗಿ ನೇಮಿಸಿ ಅಕಾಡೆಮಿ ಆದೇಶ ಹೊರಡಿಸಿದೆ.
ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಮೂರುವರೆ ದಶಕದಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಖ್ಯಾತಿ ಗಳಿಸಿದ್ದಾರೆ. ಈವರಗೆ 750ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟೀಯ ಮಟ್ಟದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಉಡುಪಿ-ಮಣಿಪಾಲ ಕುರಿತು 5 ಪುಸ್ತಕ, ಪೇಜಾವರ ಶ್ರೀ, ಪತ್ರಿಕಾ ಛಾಯಾಗ್ರಹಣ ಸೇರಿದಂತೆ ಒಟ್ಟು 8 ಪುಸ್ತಕ ಪ್ರಕಟವಾಗಿವೆ.
ಆಂಧ್ರ ಪ್ರದೇಶದ ಫೋಟೋಗ್ರಫಿ ಅಕಾಡೆಮಿಯೂ ಸಹ ಇವರ ಕೃತಿಗಳ ಕುರಿತಾಗಿ ಪುಸ್ತಕ ಪ್ರಕಟಿಸಿದೆ. ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯು ಆಸ್ಟ್ರೋ ಮೋಹನ ಅವರನ್ನು ಅಸಿಸ್ಟೆಂಟ್ ಕಂಟ್ರಿ ಮೆಂಬರ್ಶಿಪ್ ಡೈರೆಕ್ಟರ್ ಆಗಿ ಆಯ್ಕೆ ಮಾಡಿಕೊಂಡಿದೆ.