

ನರಗುಂದ: ಗ್ರಾಮೀಣ ಪ್ರದೇಶದ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಆಚಮಟ್ಟಿಯಲ್ಲಿ ಜಿಪಂ ಇಲಾಖೆಯ 60 ಲಕ್ಷ ರೂ. ವೆಚ್ಚದ ಗುರ್ಲಕಟ್ಟಿ-ಚಿಕ್ಕನರಗುಂದ (ಆಚಮಟ್ಟಿ ಸೀಮೆ) ರಸ್ತೆ ಸುಧಾರಣೆ, ಸಂಕಧಾಳ ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ಸಮುದಾಯ ಭವನ ನಿರ್ವಣ, 45 ಲಕ್ಷ ರೂ. ವೆಚ್ಚದ ಸಂಕಧಾಳ ಶಿರಸಂಗಿ ಒಳರಸ್ತೆ ದುರಸ್ತಿ, ಚಿಕ್ಕನರಗುಂದ ಗ್ರಾಮದ ಎಸ್.ಟಿ. ಕಾಲನಿಯಲ್ಲಿ 40.50 ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ಹಾಗೂ ಚರಂಡಿ ನಿರ್ವಣ, 40 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕನರಗುಂದ ಕುರುಗೋವಿನಕೊಪ್ಪ ಗ್ರಾಮದ ಒಳರಸ್ತೆ ದುರಸ್ತಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿ. ಗುತ್ತಿಗೆದಾರರು ಸ್ಥಳೀಯರ ಸಹಕಾರದೊಂದಿಗೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಪ್ರಸ್ತುತ ರಾಜಕೀಯ ಬೆಳವಣಿಗೆ ಕುರಿತು ಕೆಲವೊಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಈ ಅವಧಿಯಲ್ಲಿ ಸಂಪೂರ್ಣ ಅಧಿಕಾರ ನಡೆಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಜಿಪಂ ಸದಸ್ಯೆ ರೇಣುಕಾ ಅವರಾದಿ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಅಣ್ಣಪ್ಪಗೌಡ ಪಾಟೀಲ, ಬಸವರಾಜ ಜಾಲಿಕಟ್ಟಿ, ಕಲ್ಲಪ್ಪ ತೋರಣಗಲ್ಲ, ಸಿದ್ದಪ್ಪ ಹಾದಿಮನಿ, ಈರಣ್ಣ ಹೊಂಗಲ, ಡಾ. ಸಿ.ಕೆ. ರಾಚನಗೌಡ್ರ, ಸುರೇಶ ಹುಡೇದಮನಿ, ರಾಮನಗೌಡ ಪಾಟೀಲ, ಸಂಗನಗೌಡ ಬಾಳನಗೌಡ್ರ, ಫಕೀರಗೌಡ ಬಾಳನಗೌಡ್ರ, ಯಲ್ಲಪ್ಪ ಜಾಲಿಕಟ್ಟಿ, ಎಂ.ಡಿ. ತೂಗುಣಸಿ, ಪಿ.ಎ. ಹಿರೇಮಠ, ಸತೀಶ ನಾಗನೂರ, ಉಮೇಶ ಹಿರೇಮಠ, ನಾಗಪ್ಪಜ್ಜ ನಾಯ್ಕರ, ಆನಂದಗೌಡ, ಸಿ.ಆರ್. ಕುರ್ತಕೋಟಿ, ಸುರೇಶ ಸಾತಣ್ಣವರ, ರಾಚನಗೌಡ ಚಿನ್ನಪ್ಪಗೌಡ್ರ ಇತರರು ಉಪಸ್ಥಿತರಿದ್ದರು.