ಆಸ್ಟರ್ ಆರ್​ವಿ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆ ವಿಭಾಗ ಉದ್ಘಾಟನೆ

hospital
Published on

ಬೆಂಗಳೂರು: ಜೆ.ಪಿ. ನಗರದ ಆಸ್ಟರ್ ಆರ್​ವಿ ಆಸ್ಪತ್ರೆಯಲ್ಲಿ ಸುಸಜ್ಜಿತ ಮಹಿಳಾ ಮತ್ತು ಮಕ್ಕಳ ಆರೈಕೆ ವಿಭಾಗವನ್ನು ಗುರುವಾರ ಉದ್ಘಾಟಿಸಲಾಯಿತು. ಅರಿವಳಿಕೆ, ಹೃದ್ರೋಗ, ವಿಕಿರಣಶಾಸ್ತ್ರಜ್ಞರು ಸೇರಿ ವಿವಿಧ ತಜ್ಞವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ತೀವ್ರ ನಿಗಾ ಘಟಕ, ಲ್ಯಾಪರೋ ಸ್ಕೋಪಿಕ್, ಆಂಕಾಲಾಜಿ, ಭ್ರೂಣ ಚಿಕಿತ್ಸೆ ಮತ್ತಿತರ ಸೌಲಭ್ಯಗಳಿವೆ.

ಆಸ್ಪತ್ರೆಯ ಸ್ತ್ರೀರೋಗಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಈಶ್ವರ್ ಮಾತನಾಡಿ, ಮಹಿಳೆಯರಿಗೆ ಸಹಜ ಹೆರಿಗೆ ಆಗಬೇಕೆಂಬ ಆಪೇಕ್ಷೆ ಇರುತ್ತದೆ. ಆ ನಿಟ್ಟಿನಲ್ಲಿ ಸುಸಜ್ಜಿತ ಸೌಲಭ್ಯ ಕಲ್ಪಿಸಲು ಮಕ್ಕಳ ಆರೈಕೆ ಮತ್ತು ಪ್ರಸೂತಿ ವಿಭಾಗ ಆರಂಭಿಸಿದ್ದೇವೆ ಎಂದರು.

ದೇಶದಲ್ಲಿ 100 ಮಹಿಳೆಯರ ಪೈಕಿ 10ರಿಂದ 20 ಮಂದಿಗೆ ಬಂಜೆತನ ಸಮಸ್ಯೆ ಕಾಡುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಂಜೆತನ ನಿವಾರಣೆ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗು ವುದು. ಅಲ್ಲದೆ, ರೊಬಾಟಿಕ್ ಸರ್ಜರಿ, ರಕ್ತನಿಧಿ, ಯೋಗ, ಫಿಜಿಯೊ ಮತ್ತು ನೇಚರ್ ಥೆರಪಿ, ಸಲಹಾ ಕೇಂದ್ರ ಇತ್ಯಾದಿ ಚಿಕಿತ್ಸೆ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಡಾ. ಸುನೀಲ್ ಈಶ್ವರ್ ಹೇಳಿದರು.

ಕಾಪೋರೇಟರ್ ಮಾಲತಿ ಸೋಮಶೇಖರ್, ಮಾಜಿ ಕಾಪೋರೇಟರ್ ಸೋಮಶೇಖರ್ ಇದ್ದರು.

ಬೆಂಗಳೂರು ದಕ್ಷಿಣ ಮತ್ತು ಸುತ್ತ ಮುತ್ತಲಿನ ಮಕ್ಕಳಿಗೆ ವಿಶ್ವ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮಕ್ಕಳ ವಿಭಾಗವನ್ನು ಆರಂಭಿಸಲಾಗಿದೆ. ಎಲ್ಲ ರೋಗಿಗಳಿಗೆ ಸುಧಾರಿತ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲು ನಾವು ಬಯಸುತ್ತೇವೆ. | ಡಾ.ಕೆ.ಎನ್. ಹರ್ಷ, ಆಸ್ಟರ್ ಆರ್​ವಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net