ಡೀ ಮನ್ ರೂಪದಲ್ಲಿ ಅಬ್ಬರಿಸಿದ ರವಿ ಕಟಪಾಡಿ

udp-19-ravikatpadi
Published on

ಉಡುಪಿ: ಅಷ್ಟಮಿಯಂದು ವಿಶಿಷ್ಟ ಅಬ್ಬರದ ವೇಷಭೂಷಣಗಳೊಂದಿಗೆ ಗಮನಸೆಳೆದಿರುವ ಉಡುಪಿ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿಯೂ ಡೀ ಮನ್ ರೂಪದಲ್ಲಿ ಕಾಣಿಸಿಕೊಂಡಿದ್ದು, ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಬಡಮಕ್ಕಳಿಗೆ ವೈದ್ಯಕೀಯ ನೆರವು ನೀಡಲಿದ್ದಾರೆ.

ಕಟಪಾಡಿ ಕೋಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರವಿ ಕಟಪಾಡಿ ವೇಷಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ಕೃಷ್ಣಾಷ್ಟಮಿಯಂದು ವೇಷ ಹಾಕಿ ನನ್ನ ತಂಡದೊಂದಿಗೆ ಪ್ರದರ್ಶನ ನೀಡುತ್ತಿದ್ದೇನೆ. ಇದುವರೆಗೆ 90 ಲಕ್ಷ ರೂ. ಹಣವನ್ನು ಸಂಗ್ರಹಣೆ ಮಾಡಿದ್ದು, 66 ಮಕ್ಕಳಿಗೆ ಚಿಕಿತ್ಸೆಗಾಗಿ ನೀಡಿದ್ದೇವೆ. ಈ ಬಾರಿಯೂ 10 ಲಕ್ಷರೂ ಜಮೆ ಮಾಡಿ, 1 ಕೋಟಿ ರೂ. ತಲುಪುವ ಭರವಸೆ ಇದೆ ಎಂದರು.

ವೇಷದ ಜವಾಬ್ದಾರಿ ವಹಿಸಿಕೊಂಡಿರುವ ಸ್ಮಾಟರ್‌ಆರ್ಟ್ ಸಂಸ್ಥೆಯ ಮುಖ್ಯಸ್ಥ ಆಕ್ಷಯ್ ಮಾತನಾಡಿ, ಡೀ ಮನ್ ವೇಷಕ್ಕಾಗಿ ಕಳೆದ ಮೂರು ತಿಂಗಳಿನಿಂದ ಪ್ರಯತ್ನ ಪಟ್ಟಿದ್ದೇವೆ. ದೇಹಕ್ಕೆ ಹಾನಿಕಾರಕವಲ್ಲದ ಬಣ್ಣವನ್ನು ಉಪಯೋಗಿಸಲಾಗಿದೆ ಎಂದರು. ರವಿ ಕಟಪಾಡಿ ತಂಡದ ಮಾರ್ಗದರ್ಶಕ ಮಹೇಶ್ ಶೆಣೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net