ಪೋಸ್ಟ್ ಮ್ಯಾನ್ ಮೇಲೆ ಹಲ್ಲೆ

post
Published on
ಮಂಗಳೂರು: ನಗರದ ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಮೇಲೆ ಯುವಕನೊಬ್ಬ ಮಾರಕಾಯುಧದಿಂದ ಹಲ್ಲೆ ನಡೆಸಿದ ಘಟನೆ ಮಠದಕಣಿ ಬಳಿ ನಡೆದಿದೆ.
ಘಟನೆಯಲ್ಲಿ ಕೋಟೆಕಾರ್ ನಿವಾಸಿ, ಪೋಸ್ಟ್ ಮ್ಯಾನ್ ದಿನೇಶ್ (49) ಗಾಯಗೊಂಡಿದ್ದಾರೆ. ಮಠದಕಣಿ ನಿವಾಸಿ ಮನೀಶ್(21) ಹಲ್ಲೆಗೈದ ಆರೋಪಿ.
ದಿನೇಶ್ ಕಳೆದ ಹಲವು ವರ್ಷಗಳಿಂದ ಅಶೋಕನಗರ ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಆಗಿದ್ದು, ಎಂದಿನಂತೆ ಕಚೇರಿಯಿಂದ ಕಾಗದ ಬಟವಾಡೆ ಮಾಡಲು ತೆರಳಿದ್ದಾಗ ಘಟನೆ ನಡೆದಿದೆ. ಮಠದಕಣಿ ನಿವಾಸಿ ಮನೀಶ್‌ಗೆ ರಿಜಿಸ್ಟರ್ ಕಾಗದ ಬಂದಿದ್ದು ಅದನ್ನು ಕೊಡಲು ಹೋದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಾರಕಾಸ್ತ್ರದಿಂದ ಏಕಾಏಕಿ ಹಲ್ಲೆ ಮಾಡಿದ್ದು, ಪೋಸ್ಟ್ ಮ್ಯಾನ್ ಅಲ್ಲಿಂದ ಓಡಿ ತಪ್ಪಿಸಿ ಕೊಂಡಿದ್ದು, ಈ ಸಂದರ್ಭ ಅವರ ಬೈಕ್ ಪುಡಿಗಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net