ವೃದ್ಧ ತಾಯಿಗೆ ಪುತ್ರ, ಮೊಮ್ಮಗನಿಂದ ಹಲ್ಲೆ

ajji (2)
Published on

ಮಂಗಳೂರು: ಅನಾರೋಗ್ಯ ಪೀಡಿತ ವೃದ್ಧ ತಾಯಿಗೆ ಪಾನಮತ್ತರಾಗಿ ಪುತ್ರ ಮತ್ತು ಮೊಮ್ಮಗ ಹಲ್ಲೆ ನಡೆಸಿರುವ ರಾಕ್ಷಸೀ ಕೃತ್ಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ನಡೆದಿದೆ.

ಹಲಸಿನಕಟ್ಟೆ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ(85) ಹಲ್ಲೆಗೊಳಗಾದವರು. ಅವರ ಪುತ್ರ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್ ಶೆಟ್ಟಿ ಆರೋಪಿಗಳು. ಈ ಇಬ್ಬರು ಸೇರಿಕೊಂಡು ವೃದ್ಧೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಮೊಮ್ಮಗ ಅವರನ್ನು ಮೇಲಕ್ಕೆತ್ತಿ ನೆಲಕ್ಕೆ ಒಗೆದಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇನ್ನೋರ್ವ ಮೊಮ್ಮಗ ಈ ಘಟನೆಯನ್ನು ವಿಡಿಯೋ ಮಾಡಿದ್ದು, ಅದರಿಂದಾಗಿಯೇ ಘಟನೆ ಬೆಳಕಿಗೆ ಬಂದಿದೆ.

ಪಾಡ್ದನ ಗಾಯಕಿಯಾಗಿರುವ ಅಪ್ಪಿ ಶೆಡ್ತಿ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಮಲಗಿದಲ್ಲೇ ಇದ್ದಾರೆ. ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಿಗೆ ಕ್ರಮಕ್ಕೆ ಮುಂದಾಗಿರುವ ಬೆಳ್ತಂಗಡಿ ಠಾಣೆ ಎಸ್ಐ ನಂದಕುಮಾರ್ ನೇತೃತ್ವದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net