ಸಂಘ ಸಂಸ್ಥೆಗಳು ದುರ್ಬಳಕೆ ಆಗದಿರಲಿ

15 KRN-1
ಕೆ.ಆರ್.ನಗರದ ರೋಟರಿ ಕ್ಲಬ್ ಆವರಣದಲ್ಲಿ ಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎಚ್.ಆರ್.ಕೇಶವ, ಸತ್ಯನಾರಾಯಣ್, ನಾಗರಾಜ್‌ಬಾವಿಕಟ್ಟಿ, ರಾಘವೇಂದ್ರ, ಎಚ್.ವಿ.ವಿನಯ್, ಅರುಣ್.ಬಿ.ನರಗುಂದ್, ಸಿ.ವಿ.ಮೋಹನ್‌ಕುಮಾರ್, ಶಶಿಭೂಷಣ್ ಇದ್ದರು.
Published on

ಕೆ.ಆರ್.ನಗರ: ಸಂಘ ಸಂಸ್ಥೆಗಳನ್ನು ರಚನೆ ಮಾಡಿದ ನಂತರ ಅವುಗಳ ಮೂಲಕ ಸಮಾಜ ಮುಖಿ ಕೆಲಸ ಮಾಡಬೇಕೆ ಹೊರತು ಪ್ರಚಾರ ಪಡೆಯಲು ದುರ್ಬಳಕೆ ಮಾಡಬಾರದು ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಎಚ್.ಆರ್.ಕೇಶವ ಹೇಳಿದರು.

ಪಟ್ಟಣದ ರೋಟರಿ ಕ್ಲಬ್‌ನಲ್ಲಿ ನಡೆದ ಬುಧವಾರ ಆಯೋಜಿಸಿದ್ದ ರೋಟರಿ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಜನಸೇವೆ ಮಾಡುವಾಗ ಪ್ರತಿಫಲಾಪೇಕ್ಷೆ ಬಯಸದ ಜನರಿಗೆ ಮಾಡಿದಾಗ ಅದು ಸಾರ್ಥಕವಾಗುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ರೋಟರಿ ಸಂಸ್ಥೆ ಉತ್ತಮ ಸೇವೆ ಮಾಡಿದ್ದು ಅದು ಎಂದಿಗೂ ಮನಸ್ಸಿನಲ್ಲಿ ಉಳಿಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ಉಳ್ಳವರು ರೋಟರಿ ಸದಸ್ಯರಾಗಿ ತಮ್ಮ ಸಂಪಾದನೆಯ ಅಲ್ಪ ಭಾಗವನ್ನು ನೊಂದವರು ಮತ್ತು ಬಡವರ ಸೇವೆಗೆ ನೀಡಬೇಕು ಎಂದು ಸಲಹೆ ನೀಡಿದರು.

ಉಪ ಪ್ರಾಂತಪಾಲ ಸತ್ಯನಾರಾಯಣ್, ಕೆ.ಆರ್.ನಗರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್‌ಬಾವಿಕಟ್ಟಿ, ವಲಯ ಸೇನಾನಿ ರಾಘವೇಂದ್ರ, ಕಾರ್ಯದರ್ಶಿ ಎಚ್.ವಿ.ವಿನಯ್, ಮಾಜಿ ಅಧ್ಯಕ್ಷರಾದ ಅರುಣ್.ಬಿ.ನರಗುಂದ್, ಸಿ.ವಿ.ಮೋಹನ್‌ಕುಮಾರ್, ಶಶಿಭೂಷಣ್ ಮಾತನಾಡಿದರು. ಹೊಸದಾಗಿ ಸದಸ್ಯತ್ವ ಪಡೆದ ತಾ.ಪಂ. ಇಒ ಜಿ.ಕೆ.ಹರೀಶ್, ಇಂಜಿನಿಯರ್ ಕುಮಾರ್, ಚೆಲುವರಾಜು, ರೇಣುಕಾಪ್ರಸನ್ನ, ಪುರುಷೋತ್ತಮ್ ಅವರಿಗೆ ಪದಕ ನೀಡಿ ಸ್ವಾಗತಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕ್ರೈಸ್ತ ಮುಖಂಡ ರವೀಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ಲೋಕೇಶ್, ಪೊಲೀಸ್ ಮುಖ್ಯ ಪೇದೆ ರಾಘವೇಂದ್ರ, ಏಕಲವ್ಯ ಪ್ರಶಸ್ತಿ ವಿಜೇತ ಲೋಕೇಶ್‌ನರಸಿಂಹಾಚಾರ್ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಸದಸ್ಯರಾದ ವೈ.ಎಸ್.ಕುಮಾರ್, ಎಲ್.ವಿ.ರವಿಶಂಕರ್, ಮಲ್ಲಿಕಾರ್ಜುನ್, ಟಿ.ಎನ್.ದಯಾನಂದ್, ಬಿ.ಕೆ.ಸುರೇಶ್, ಹೆಚ್.ಡಿ.ಮಂಜುನಾಥ್, ಕೆ.ಆರ್.ನಟರಾಜು, ದಯಾನಂದ್, ಅರುಣ್‌ಕುಮಾರ್, ರವಿಕುಮಾರ್, ಅನಿಲ್‌ಪಾಟೀಲ್ಕರ್, ಸಿಡಿಪಿಒ ಅಣ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net