ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಂಘ, ಸಂಸ್ಥೆಗಳು ಸಹಕರಿಸಲಿ

20250612_123311
ಜೇನುಕಲ್ ನಗರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡೆಸ್ಕ್ ವಿತರಿಸಿದ ಶರ್ಮಿಳಾ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ವಿಷ್ಣುವರ್ಧನ್, ರಾಜಶೇಖರ್ ಇತರರಿದ್ದರು.
Published on

ಅರಸೀಕೆರೆ : ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸಂಘ, ಸಂಸ್ಥೆಗಳು ಕೈಜೋಡಿಸಬೇಕು ಎಂದು ಉದ್ಯಮಿ ಹಾಗೂ ಸಮಾಜ ಸೇವಕಿ ಡಾ. ಶರ್ಮಿಳಾ ಸಿಂಗ್ ಹೇಳಿದರು.

ಶ್ರೀ ಜೇನುಕಲ್ ನಗರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಚಿತ ಡೆಸ್ಕ್, ಕಲಿಕಾ ಪರಿಕರ ವಿತರಿಸಿ ಮಾತನಾಡಿದರು.

ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎನ್ನುವ ಹೃದಯ ಶ್ರೀಮಂತಿಕೆ ಉಳ್ಳ ಸಂಘ- ಸಂಸ್ಥೆಗಳು, ದಾನಿಗಳಿದ್ದು, ಅವರು ನೀಡಿದ ವಸ್ತುಗಳು ಸದುಪಯೋಗವಾಗಬೇಕು. ಆಗ ಮಾತ್ರ ಕೊಟ್ಟವರಿಗೂ ಸಂತೋಷ ಸಿಗುತ್ತದೆ, ಅರಸೀಕೆರೆ ನಗರ ಹಾಗೂ ಗ್ರಾಮಾಂತರದ ಮುದ್ದನಹಳ್ಳಿ, ತಿರುಪತಿ ಗ್ರಾಮದ ಶಾಲೆಗಳಿಗೂ ನೆರವು ನೀಡಲಾಗಿದೆ. ಕೆಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್ ಬೇಡಿಕೆಯಿಟ್ಟಿದ್ದು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಿಆರ್‌ಪಿ ವಿಷ್ಣುವರ್ಧನ್, ಮುಖ್ಯ ಶಿಕ್ಷಕ ರಾಜಶೇಖರ್ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net