ಅಸೋಸಿಯೇಷನ್‌ಗೆ ಜಾಗ ಮಂಜೂರುಗೊಳಿಸಿ

0102
Published on

ಬೆಳಗಾವಿ: ನಗರದಲ್ಲಿ 1992ರಲ್ಲಿ ಸ್ಥಾಪನೆಯಾಗಿ ರುವ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್‌ಗೆ ಜಾಗ ಮಂಜೂರುಗೊಳಿಸಬೇಕು ಎಂದು ಒತ್ತಾಯಿಸಿ ಪದಾಧಿಕಾರಿಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ ಅಧ್ಯಕ್ಷ ಘೂಳಪ್ಪ ಹೊಸಮನಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಮುಂದಿನ 40 ವರ್ಷಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ನಗರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ನಾಗರಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಆಟದ ಮೈದಾನಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಬುಡಾ ಆಯುಕ್ತ ಪ್ರೀತಂ ನಸ್ಲಾಪುರೆ, ಸಂಘಟನೆ ಅಧ್ಯಕ್ಷ ಪಿ.ಎಸ್. ಹಿರೇಮಠ, ಕಾರ್ಯದರ್ಶಿ ವಿನಯ ಕಾಮಕರ, ಮಲ್ಲಿಕಾರ್ಜುನ ಮುದನೂರ, ಖಜಾಂಚಿ ಎಸ್.ಎ. ಪಾಟೀಲ, ಸಾದಿಕ್ ಇನಾಮದಾರ, ಆದರ್ಶ ಮುಚ್ಚಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net