

ಚಳ್ಳಕೆರೆ: ಅತಿವೃಷ್ಠಿ-ಅನಾವೃಷ್ಠಿ ಸೇರಿ ವಿವಿಧ ಸಂದರ್ಭ ನಾಡು ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ಸಮಾಜದ ನೆರವಿಗೆ ಸಂಘ-ಸಂಸ್ಥೆ ಮುಖಂಡರು ಮಾನವೀಯ ದೃಷ್ಟಿಯಲ್ಲಿ ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಬಾಲಭವನದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಕರೊನಾ ಪರಿಸ್ಥಿತಿಯಲ್ಲಿ ಸಂಘ-ಸಂಸ್ಥೆಗಳು ಮತ್ತು ಸರ್ಕಾರದ ಕಾರ್ಯ ಶ್ಲಾಘನೀಯವಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಕಾರ್ಯಗಳನ್ನು ಬೆಂಬಲಿಸುವ ಮತ್ತು ಸ್ವಯಂ ಪ್ರೇರಿತ ಸಹಕಾರಗಳ ಮೂಲಕ ಸಮಾಜ ಸೇವೆ ಮಾಡುವ ಭಾವನೆ ಸರ್ವರಲ್ಲೂ ಇರಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಹಿರಿಯ ಮುಖಂಡ ಎನ್.ಎಸ್.ರಾಘವೇಂದ್ರ ಮಾತನಾಡಿ, 118 ವರ್ಷಗಳ ಹಿಂದೆ ಅಮೇರಿಕಾದಲ್ಲಿ ಪೊಲಿಯೋ ಮುಕ್ತ
ನಿರ್ಮೂಲನೆಗಾಗಿ ನಾಲ್ಕು ಜನರಿಂದ ಸ್ಥಾಪಿತವಾದ ರೋಟರಿ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯದಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ರೋಟರಿ ಸಂಸ್ಥೆಯ ಕಾರ್ಯಗಳ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಇದೆ. ಸಂಸ್ಥೆಗೆ ಯಾವುದೇ ರೀತಿ ಹೊರ ದೇಶದ ಹಣಕಾಸಿನ ನೆರವು ಇರುವುದಿಲ್ಲ.
ಸಾಮಾಜಿಕ ಕಾರ್ಯಕ್ಕಾಗಿ ಪದಾಧಿಕಾರಿಗಳ ಪರಿಶ್ರಮ ಇರುತ್ತದೆ. ಸಮಾಜಮುಖಿ ಕಾರ್ಯ ಚಟುವಟಿಕೆಗಳಿಗೆ ಸಾರ್ವಜನಿಕರ ಸಹಕಾರ ಇರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ರಾಮಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಕೆ. ನಾಗೇಶ್, ಡಾ.ಕೆ.ಎಂ.ಜಯಕುಮಾರ್, ಡಾ.ಎನ್.ಪಿ. ನಾಗರಾಜ,
ಆರ್.ತಿಪ್ಪೇಸ್ವಾಮಿ, ಜಿಕೆಟಿ ಮೂರ್ತಿ, ಎಸ್.ಜಯಪ್ರಕಾಶ್, ಜೆ. ಸಂತೋಷ್‌ಕುಮಾರ್, ಸಿ. ಸಿದ್ದಾರ್ಥ, ಡಾ.ಎಲ್.ಎಸ್. ವೀರೇಶ್,
ಕೆ.ಎಂ.ಶಿವಕೀರ್ತಿ, ಕೆ.ಎ.ಮೂರ್ತಪ್ಪ, ಎಸ್.ವಿ.ಮುರುಗೇಶ್, ಜ್ಯೋತಿ, ಮೀರಾ ರಮೇಶ್, ಸುನೀತಾ ಇತರರಿದ್ದರು.