ಷೇರು ಬಂಡವಾಳದಿಂದ ಸಂಘ ಬೆಳವಣಿಗೆ

h21-education
Published on

ಹುಬ್ಬಳ್ಳಿ: ಸದಸ್ಯರ ಷೇರು ಬಂಡವಾಳದಿಂದಲೇ ಸಹಕಾರಿ ಸಂಘಗಳು ಬೆಳವಣಿಗೆ ಹೊಂದಲು ಸಾಧ್ಯ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಇಲ್ಲಿಯ ಜೆ.ಸಿ. ನಗರದ ಮುನ್ಸಿಪಲ್ ಎಂಪ್ಲಾಯಿಸ್ ಹಾಲ್‌ನಲ್ಲಿ ಹುಬ್ಬಳ್ಳಿ ಶಹರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹೊರಗಿನಿಂದ ಹಣ ತಂದು ಸಾಲ ನೀಡುವುದರಿಂದ ಠೇವಣಿದಾರರಿಗೆ ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಬದಲಾಗಿ ಸದಸ್ಯರು ಷೇರು ಹಣವನ್ನು ಪ್ರತಿ ತಿಂಗಳು ಹೆಚ್ಚಿಗೆ ನೀಡಬೇಕು ಎಂದರು.

ಶಹರ ಕ್ಷೇತ್ರ ಶಿಕ್ಷಣಾದಿಕಾರಿ ಎಚ್.ಎಂ. ಫಡ್ನೇಶಿ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ಮಂಜುನಾಥ ಜಂಗಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಅನಕೂಲಕ್ಕಾಗಿ ಹೊಸ ಯೋಜನೆ ಆರಂಭಿಸಲಾಗುವುದು ಎಂದರು.

ಸಂಘದ ನಿರ್ದೇಶಕ ಎಚ್.ಎಂ. ಕುಂದುರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ರಾಜ್ಯ ಉಪಾಧ್ಯಕ್ಷ ವೈ.ಎಚ್. ಬಣವಿ, ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಉರ್ದು ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಯು.ಎಂ. ಶಿರಹಟ್ಟಿ, ಉಪಾಧ್ಯಕ್ಷರಾದ ಡಿ.ಎಫ್. ಈರಗಾರ, ಅನೀಸ್ ರಾಯಚೂರ, ಸಂಘದ ನಿರ್ದೇಶಕರಾದ ಎಂ.ವಿ. ರನ್ನವರ, ಎಂ.ವೈ. ದೊಡಮನಿ, ಬಿ.ಕೆ. ಕುರಡಗಿ, ಎನ್.ಎಲ್. ಪಾಟೀಲ, ಎನ್.ಎಸ್. ಅವರಾದಿ, ಎಂ.ಎಸ್. ಗೊರವರ, ಸೈಯದ್ ಅಲಿ ಬೂದಿಹಾಳ, ಪಿ.ಇ. ಪೂಜಾರ, ಎ.ಬಿ. ಜಂತಲಿ ಇತರರು ಇದ್ದರು. ಬಿ.ಬಿ. ಕೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net