ಪತ್ತಿನ ಸಂಘಕ್ಕೆ 12 ನಿರ್ದೇಶಕರ ಅವಿರೋಧ ಆಯ್ಕೆ

ಪತ್ತಿನ ಸಂಘಕ್ಕೆ 12 ನಿರ್ದೇಶಕರ ಅವಿರೋಧ ಆಯ್ಕೆ
ತಾವರಗೇರಾ ಸಮೀಪದ ಲಿಂಗದಹಳ್ಳಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ದುರುಗಪ್ಪ , ಉಪಾಧ್ಯಕ್ಷರಾಗಿ ನಿಂಗಪ್ಪ ಅವಿರೋಧ ಆಯ್ಕೆಯಾದರು. ಪ್ರಮುಖರಾದ ಕೆಂಚಪ್ಪ, ಗಂಗಾಧರಯ್ಯ, ಮರಿಯಪ್ಪ, ಹನುಮಗೌಡ ಇದ್ದರು.
Published on

ತಾವರಗೇರಾ: ಸಮೀಪದ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 10 ಜನ ನಿರ್ದೇಶಕರು ಗುರುವಾರ ಅವಿರೋಧ ಆಯ್ಕೆಯಾದರು.

ಲಿಂಗದಹಳ್ಳಿ, ವಿರುಪಾಪುರ, ಹೊಮ್ಮಿನಾಳ, ಹೊನಗಡ್ಡಿ, ಗುಡ್ಡದಹನಮಸಾಗರ, ಹುಲಿಯಾಪುರ, ಸಿದ್ದಾಪುರ, ಹಡಗಲಿ, ಹಿರೇಮುಕರ್ತಿನಾಳ, ನೀರಲೂಟಿ ಗ್ರಾಮಗಳು ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಡುತ್ತವೆ. ಅಧ್ಯಕ್ಷ ಸ್ಥಾನಕ್ಕೆ ಲಿಂಗದಹಳ್ಳಿ ದುರಗಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಹಿರೇಮುರ್ಕತನಾಳ ನಿಂಗಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಪೀರ್‌ಸಾಬ್ ಎ. ನದಾಫ್ ಅವಿರೋಧ ಆಯ್ಕೆ ಎಂದು ಘೋಷಿಸಿದರು.

ನಿರ್ದೇಶಕರಾದ ಯಲ್ಲಪ್ಪ ಇದ್ಲಾಪುರ, ಅಮರೇಶ ಬೆಂಕಿ, ಕನಕಪ್ಪ, ಶಾಂತಮ್ಮ, ಬಾಳಮ್ಮ ಮರಳಿ ಹುಲಿಯಾಪುರ, ಬಸಪ್ಪ ಕೋಮಲಾಪುರ, ಶೇಖರಪ್ಪ ಹೊಮ್ಮಿನಾಳ, ಹನುಮಂತಪ್ಪ ನೀರಲೂಟಿ, ದೊಡ್ಡಪ್ಪ ದಾಯಪುಲ್ಲೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹನುಮನಗೌಡ, ಪ್ರಮುಖರಾದ ಪರಶುರಾಮ ಗೌಡ, ಮರಿಯಪ್ಪ ವಕೀಲ, ಗುಂಡಪ್ಪ ಮೂಲಿನಮನಿ, ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ, ಗಂಗಾಧರಯ್ಯ, ಯಮನೂರ ಎಮ್ಮಿ, ಕರೇಗೌಡ, ಯಮನೂರ ಕಡಗದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net