ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಹರಿಭಟ್‌ಗೆ ಪಿಎಚ್.ಡಿ

11spt2- akshatha Haribhat
ಡಾ.ಅಕ್ಷತಾ ಹರಿಭಟ್.
Published on

ಸೋಮವಾರಪೇಟೆ: ಕಾನ್ವೆಂಟ್ ಬಾಣೆ ನಿವಾಸಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಹರಿಭಟ್ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಲಭಿಸಿದೆ.

ಡಾ.ಎಚ್.ವಿ.ಬಾಲಚಂದ್ರ ಅಚಾರ್ ಅವರ ಮಾರ್ಗದರ್ಶನದಲ್ಲಿ ‘ಎ ಮಲ್ಟಿ ಥ್ರೇಶೊಲ್ಡ್ ಟೆಕ್ನಿಕ್ ಟು ಇಂಪ್ರೂವ್ ದಿ ಅಕ್ಯುರೆಸಿ ಥ್ರೂ ಪುಟ್ ಆಫ್ ಡೇಟಾ ಆ್ಯಂಡ್ ಎ ನಾವೆಲ್ ಎನರ್ಜಿ ಆ್ಯಂಡ್ ಸೆಕ್ಯೂರಿಟಿ ಎಫಿಷಿಯಂಟ್ ರೂಟಿಂಗ್ ಸ್ಟ್ರಾೃಟರ್ಜಿ ಇನ್ ವಯರ್‌ಲೆಸ್ ಸೆನ್ಸಾರ್ ನೆಟ್‌ವರ್ಕ್ಸ್’ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.

ಬೆಳಗಾವಿ ಡಾ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪಿಎಚ್.ಡಿ ಪಡೆದುಕೊಂಡರು. ಇವರು ಕಾನ್ವೆಂಟ್ ಬಾಣೆ ನಿವಾಸಿ ಕಾಫಿ ಮಂಡಳಿ ಉಪಕಾರ್ಯದರ್ಶಿ ಎಂ.ಎನ್.ಮಹಾಲಿಂಗೇಶ್ವರ ಹಾಗೂ ಅಂಚೆ ಇಲಾಖೆ ನಿವೃತ್ತ ಅಧಿಕಾರಿ ಎ.ಶಾಂತಕುಮಾರಿ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net