ರೈಲ್ವೆಯ ಮೃತ ಉದ್ಯೋಗಿ ಕುಟುಂಬಕ್ಕೆ ನೆರವು

New Rail new
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆಯು ತನ್ನ ರೈಲ್ವೆ ವೇತನ ಪ್ಯಾಕೇಜ್ ಯೋಜನೆಯಡಿ ಹುಬ್ಬಳ್ಳಿ ವಿಭಾಗದ ಮೃತ ಉದ್ಯೋಗಿ ಕುಟುಂಬಕ್ಕೆ 1 ಕೋಟಿ ಆರ್ಥಿಕ ನೆರವು ನೀಡಿದೆ.

ಕಳೆದ ಮಾರ್ಚ್​ನಲ್ಲಿ ನಿಧನರಾದ ಹುಬ್ಬಳ್ಳಿ ವಿಭಾಗದ ಆಸ್ಪತ್ರೆ ಸಹಾಯಕ ದಿ. ಚನ್ನಬಸಪ್ಪ ಕುಂಬಾರ ಅವರ ಕುಟುಂಬಕ್ಕೆ ಈ ನೆರವು ನೀಡಲಾಗಿದೆ.

ಈ ಕ್ಲೈಮ್ ಮೃತ ಉದ್ಯೋಗಿಯ ಪತ್ನಿ ಮಲ್ಲಮ್ಮ ಕುಂಬಾರ ಅವರ ಬ್ಯಾಂಕ್ ಖಾತೆಗೆ ಇತ್ತೀಚೆಗೆ ನೇರವಾಗಿ ಜಮಾ ಮಾಡಲಾಗಿದೆ. ಕುಟುಂಬಕ್ಕೆ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳು ಮತ್ತು ಇತರ ಸೆಟ್ಲಮೆಂಟ್ ಬಾಕಿಗಳನ್ನು ಸಹ ಒದಗಿಸಲಾಗಿದೆ.

ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರನ್ ಮಾಥುರ್ ಅವರು ಕುಟುಂಬಕ್ಕೆ ಸಂತಾಪ ಸೂಚಿಸಿ, ಜೀವನಕ್ಕೆ ಪರಿಹಾರವಿಲ್ಲ. ಆದರೆ, ಕಷ್ಟದ ಸಮಯದಲ್ಲಿ ನೈಋತ್ಯ ರೈಲ್ವೆ ಆಡಳಿತವು ತನ್ನ ಉದ್ಯೋಗಿಗಳ ಕುಟುಂಬಗಳೊಂದಿಗೆ ಸದಾ ನಿಲ್ಲುತ್ತದೆ ಎಂದು ಹೇಳಿದರು.

ಹುಬ್ಬಳ್ಳಿ ವಿಭಾಗದ ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ, ನೈಋತ್ಯ ರೈಲ್ವೆಯ ಮುಖ್ಯ ಕಾರ್ವಿುಕ ಅಧಿಕಾರಿ ಸುವರ್ಣಾ ದೇಶಪಾಂಡೆ, ಹಿರಿಯ ವಿಭಾಗೀಯ ಕಾರ್ವಿುಕ ಅಧಿಕಾರಿ ಆರ್. ಪ್ರಸಾದ, ಎಸ್. ಇಚಂಗಿಮಠ, ಎಸ್​ಬಿಐ ಬ್ಯಾಂಕಿನ ಹಿರಿಯ ಅಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net