

ಗುರುಪುರ: ವಿಶ್ವ ಹಿಂದು ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಜೈ ಶ್ರೀ ರಾಮ್ ಘಟಕ ಎಡಪದವು ಇದರ ಬಜರಂಗ ದಳ ಸೇವಾ ಬ್ರಿಗೇಡ್ ಎಡಪದವು ಘಟಕದ 6ನೇ ವರ್ಷ ಪೂರ್ಣಗೊಂಡ ನೆನಪಿಗಾಗಿ 72ನೇ ಮಾಸಿಕ ಯೋಜನೆಯಲ್ಲಿ ಅಶಕ್ತ 3 ಕುಟುಂಬಗಳಿಗೆ ನೆರವು ಹಸ್ತಾಂತರಿಸಲಾಯಿತು.
ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಡ್ವೆಯ ಶ್ರದ್ಧಾ ಅವರ ಮೂರು ತಿಂಗಳ ಮಗುವಿನ ಚಿಕಿತ್ಸೆಗಾಗಿ 50 ಸಾವಿರ ರೂ., ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ, ಪ್ರಸ್ತುತ ಕಂಕನಾಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಜಯಲಕ್ಷ್ಮೀ ಮತ್ತು ಯಶವಂತ ದಂಪತಿ ಪುತ್ರ ಸವಿನ್ ಚಿಕಿತ್ಸೆಗೆ 25 ಸಾವಿರ ರೂ. ಹಾಗೂ ಕಲ್ಲಮುಂಡ್ಕೂರು ಗ್ರಾಮದ ಕಲಸಬೈಲು ನಿವಾಸಿ ಬಾಲಕಿ ಅಕ್ಷಿತಾಳ ಮಧುಮೇಹ ಕಾಯಿಲೆ ಚಿಕಿತ್ಸೆಗೆ 25 ಸಾವಿರ ರೂ. ನೆರವು ನೀಡಲಾಗಿದೆ.
ಎಡಪದವಿನ ಬಜರಂಗ ದಳ ಸೇವಾ ಬ್ರಿಗೇಡ್ ಇದುವರೆಗೆ ತನ್ನ ಮಾಸಿಕ ಸೇವಾ ಯೋಜನೆಗಳ ಮೂಲಕ 161 ಕುಟುಂಬಗಳಿಗೆ 50.52 ಲಕ್ಷ ರೂ. ಸಹಾಯಧನ ನೀಡಿದೆ.
ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ-ಸಂಯೋಜಕ ಭುಜಂಗ ಕುಲಾಲ್, ಮಂಗಳೂರಿನ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್‌ನ ಮನೋಜ್ ಕೋಡಿಕೆರೆ, ಗುರುಪುರ ಜಿಲ್ಲಾ ಸತ್ಸಂಗ ಪ್ರಮುಖ್ ವಸಂತ ಗುರುಪುರ, ವಿಹಿಂಪ ಗುರುಪುರ ಪ್ರಖಂಡ ಕಾರ್ಯದರ್ಶಿ ದಿನೇಶ್ ಮಿಜಾರು, ಬಜರಂಗ ದಳ ಗುರುಪುರ ಪ್ರಖಂಡ ಸಹ-ಸಂಯೋಜಕ ಹರೀಶ್ ಎಡಪದವು, ಎಡಪದವಿನ ಶ್ರೀ ರಾಮ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ದೇವಾಡಿಗ, ಎಡಪದವಿನ ಜೈ ಶ್ರೀ ರಾಮ್ ಶಾಖೆ ಅಧ್ಯಕ್ಷ ಚಂದ್ರಕಾಂತ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.