

ಬದಿಯಡ್ಕ: ವ್ಯಕ್ತಿಯಾಗಿ ಸಂಘಟನೆಯನ್ನು ಕಟ್ಟಿ, ಕಲೆ-ಕಲಾವಿದರಿಗೆ ನೆರವಾಗುವ ಚಿಂತನೆ ಶ್ಲಾಘನೀಯ. ಪಟ್ಲ ಪೌಂಡೇಶನ್ ಮೂಲಕ ಜನಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಎಡನೀರು ಮಠದಲ್ಲಿ 3ನೇ ಚಾತುರ್ಮಾಸ್ಯ ವ್ರತಾಚರಣೆಯ 58ನೇ ದಿನ ಮಂಗಳವಾರ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅರ್ಪಿಸಿದ ಯಕ್ಷಗಾನಾರಾಧನೆಯ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಜತೆಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಉಪಸ್ಥಿತರಿದ್ದರು. ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸತೀಶ್ ಶೆಟ್ಟಿ ಪಟ್ಲ, ಸತ್ಯನಾರಾಯಣ ಪುಣಿಂಚಿತ್ತಾಯ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಅಮೃತಾ ಅಡಿಗ ಅವರಿಂದ ಯಕ್ಷಗಾನಾರಾಧನೆ ನಡೆಯಿತು.