

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮದ ಕಾವು ನವೋದಯ ಸ್ವಸಹಾಯ ಸಂಗಳ ಒಕ್ಕೂಟ ವತಿಯಿಂದ ಅನಾರೋಗ್ಯಪೀಡಿತ ಸಂಘದ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು.
ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಣಿಯಡ್ಕ ನಂದಾದೀಪ ನವೋದಯ ಸ್ವ-ಸಹಾಯ ಸಂಘದ ಸದಸ್ಯೆ ವನಜಾಕ್ಷಿ ಮತ್ತು ಕೆರೆಮಾರು ಬ್ರಹ್ಮಶ್ರೀ ನವೋದಯ ಸ್ವ-ಸಹಾಯ ಸಂಘದ ಸದಸ್ಯೆ ದಿವ್ಯಶ್ರೀ ಅವರಿಗೆ ನವೋದಯ ಒಕ್ಕೂಟದ ತುರ್ತು ಪರಿಹಾರ ನಿಧಿಯಿಂದ ವೈದ್ಯಕೀಯ ನೆರವಿಗಾಗಿ ಸಹಾಯಧನ ವಿತರಿಸಲಾಯಿತು.
ಕಾವು ನವೋದಯ ಸ್ವ-ಸಹಾಯ ಸಂಗಳ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಗೌರವಾಧ್ಯಕ್ಷ ಅಮ್ಮು ಪೂಂಜ, ಮಾಜಿ ಅಧ್ಯಕ್ಷ ಚಿದಾನಂದ ಆಚಾರ್ಯ ಸಸ್ಟೇಟಿ, ಕಾವು ವಲಯ ಪ್ರೇರಕಿ ಮಾಧವಿ ಅವರು ಅನಾರೋಗ್ಯ ಪೀಡಿತ ಸಂಘ ಸದಸ್ಯರಿಬ್ಬರ ಮನೆಗೆ ಭೇಟಿ ನೀಡಿ ಸಹಾಯಧನ ವಿತರಿಸಿದರು.