ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವು

Neravu
Published on

ಬ್ಯಾಡಗಿ: ತಾಲೂಕು ಶಂಕರೀಪುರ ಗ್ರಾಮದ ಶ್ರೀ ಮಾರುತಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.5 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಜಿಲ್ಲಾ ಯೋಜನಾಧಿಕಾರಿ ಎಂ. ರಘುಪತಿ ಗುರುವಾರ ವಿತರಿಸಿದರು.

ಯೋಜನೆ ಮೇಲ್ವಿಚಾರಕ ಎನ್.ಎಸ್. ಸಯ್ಯದ್, ದೇವಸ್ಥಾನ ಸಮಿತಿ ಅಧ್ಯಕ್ಷ ನಿಂಗಪ್ಪ ಬಿದರಿ ಕಾರ್ಯದರ್ಶಿ ರಾಜಪ್ಪ ಪರಮಣ್ಣನವರ, ಗ್ರಾಮದ ಮುಖ್ಯಸ್ಥರಾದ ಫಕೀರಪ್ಪ ಬಿದರಕಟ್ಟಿ, ಸುಭಾಸಪ್ಪ ಚೂರಿ, ಶಂಕ್ರಪ್ಪ ಬಡ್ಡಿಯವರ, ಪ್ರಭು ಪರಮಣ್ಣನವರ, ಚನ್ನಬಸಪ್ಪ ಪರಮಣ್ಣನವರ, ವೀರಣ್ಣ ಗುಡಿ, ಮಂಜಪ್ಪ ಬಿದರಕಟ್ಟಿ, ವೀರಪ್ಪ ಸಣ್ಣಶಿವಣ್ಣವರ, ತಿಪ್ಪಣ್ಣ ಬಿದರಿ, ನಾಗಪ್ಪ ಬಣಕಾರ್, ರಮೇಶ್ ಪರಮಣ್ಣವರ, ಬಸಪ್ಪ ಸಣ್ಣಶಿವಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net