

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಬಿ.ಸಿ. ಟ್ರಸ್ಟ್ ವತಿಯಿಂದ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಬೆಳ್ಳಾರೆ ಹಿಂದು ರುದ್ರ ಭೂಮಿಗೆ 1, 51,680 ರೂ. ಮೌಲ್ಯದ ಸಿಲಿಕಾನ್ ಚೇಂಂಬರ್ ಅಳವಡಿಸುವ ಮಂಜೂರಾತಿ ಪತ್ರ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಬೆಳ್ಳಾರೆ ಗ್ರಾಪಂ ಅಧ್ಯಕ್ಷೆ ನಮಿತಾ, ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್‌ಗೆ ಹಸ್ತಾಂತರಿಸಿದರು. ಪಂಚಾಯಿತಿ ಸದಸ್ಯ ಚಂದ್ರಶೇಖರ್ ಪನ್ನೆ, ವಲಯ ಅಧ್ಯಕ್ಷೆ ವೇದಾ ಎಲ್.ಎಚ್ ಶೆಟ್ಟಿ, ಒಕ್ಕೂಟ ಅಧ್ಯಕ್ಷೆ ವಾರಿಜಾ, ಮಾಜಿ ಅಧ್ಯಕ್ಷೆ ಹರಿಣಾಕ್ಷಿ, ವಲಯ ಮೇಲ್ವಿಚಾರಕಿ ವಿಶಾಲ ಕೆ, ಗ್ರಾಮದ ಸೇವಾ ಪ್ರತಿನಿಧಿ ಹರಿಣಾಕ್ಷಿ, ಒಕ್ಕೂಟ ಜತೆ ಕಾರ್ಯದರ್ಶಿ ವೀಣಾ, ಪಂಚಾಯಿತಿ ಸದಸ್ಯೆ ಜಯಶ್ರೀ, ಪಂಚಾಯಿತಿ ಸಿಬ್ಬಂದಿ ಹೊನ್ನಪ್ಪ, ಹರೀಶ್, ಕಾರ್ಯದರ್ಶಿ ತಿರುಮಲೇಶ್ವರ ಉಪಸ್ಥಿತರಿದ್ದರು.