ಸ್ವಸಹಾಯ ಸಂಘ, ರೈತರಿಗೆ ಕೆಸಿಸಿ ಬ್ಯಾಂಕ್​ನಿಂದ ನೆರವು

1 KND 2
Published on

ಕುಂದಗೋಳ: ಸ್ವಸಹಾಯ ಸಂಘಗಳಿಗೆ ಹಾಗೂ ರೈತರಿಗೆ ಅನೇಕ ಸಾಲ ಯೋಜನೆಗಳನ್ನು ಪರಿಚಯಿಸುವ ಮೂಲಕ ಕೆಸಿಸಿ ಬ್ಯಾಂಕ್ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ ಹೇಳಿದರು.


ಪಟ್ಟಣದ ಕೆಸಿಸಿ ಬ್ಯಾಂಕ್​ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಂದಗೋಳ ಹಾಗೂ ಸಂಶಿ ಶಾಖೆಯಲ್ಲಿ ಪ್ರಾರಂಭವಾದ ಹೊಸ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಶಾಸಕ ಎಂ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರ ಮೊದಲ ಬ್ಯಾಂಕ್ ಇದಾಗಿದೆ. 108 ವರ್ಷದ ಇತಿಹಾಸ ಹೊಂದಿದ್ದು , ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ಧ್ಯೇಯವನ್ನಿಟ್ಟುಕೊಂಡು ಸಾಗುತ್ತ ಬಂದಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರಿ ಬ್ಯಾಂಕ್​ಗಳು ಸಾಕಷ್ಟು ಆರಂಭಗೊಳ್ಳುತ್ತಿದ್ದು, ಇದರ ಮಧ್ಯೆ ಕೆಸಿಸಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಡಿಜಿಟಲೀಕರಣಗೊಂಡು ಗ್ರಾಹಕರ ಸ್ನೇಹಿ ಬ್ಯಾಂಕ್ ಆಗಬೇಕು ಎಂದರು.


ಕಾರ್ಯಕ್ರಮದಲ್ಲಿ ದಶರಥ ಕಲಾಲ, ಮಂಜುನಾಥ ಕಮಡೊಳ್ಳಿ, ಈಶ್ವರಯ್ಯ ಮಣಕಟ್ಟಿಮಠ,ರುದ್ರುಗೌಡ ಚನ್ನಪ್ಪಗೌಡ್ರ, ನಾಗನಗೌಡ ಪಾಟೀಲ, ಗಣೇಶ ಕೊಕಾಟೆ ಇದ್ದರು. ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಮಹಾರಾಜ ಪಾಟೀಲ ನಿರೂಪಿಸಿದರು, ಎಂ.ಎಸ್ ಮೆಣಸಿನಹಾಳ ವಂದಿಸಿದರು.-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net